* ಕಳೆದ ವರ್ಷ ಗೂಢಚರ್ಯೆ ಆರೋಪದ ಮೇಲೆ ಬಂಧಿತರಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಉದ್ಯೋಗಿಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ..
* ಭಾರತದ ನೌಕಾ ಪಡೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದ ಈ ಅಧಿಕಾರಿಗಳು ಮಾಡಿದ ಅಪರಾಧ ಏನು ಅನ್ನೋದ್ರ ಸ್ಪಷ್ಟ ಚಿತ್ರಣ ಈವರೆಗೂ ಭಾರತಕ್ಕೆ ಸಿಕ್ಕಿಲ್ಲ.. ಅಷ್ಟರಲ್ಲಾಗಲೇ ಎಲ್ಲರಿಗೂ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.
* 30/10/2022ರಂದು ಭಾರತೀಯ ನೌಕಾ ದಳದ 8 ನಿವೃತ್ತ ಅಧಿಕಾರಿಗಳನ್ನು ಕತಾರ್‌ನಲ್ಲಿ ಬಂಧಿಸಲಾಗಿತ್ತು. ಹಲವು ಬಾರಿ ಜಮೀನಿಗೆ ಅರ್ಜಿ ಹಾಕಿದರೂ ಕತಾರ್ ಕೋರ್ಟ್ ತಿರಸ್ಕರಿಸಿತ್ತು..
*ಭಾರತೀಯ ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ, "ನಾವು ಮರಣದಂಡನೆಯ ತೀರ್ಪಿನಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇವೆ ಮತ್ತು ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದೆ.
ಇಷ್ಟಾಗಿ ಇವರ ಬಂಧನದ ವಿಚಾರ ಕೂಡಾ ಭಾರತಕ್ಕೆ ತುಂಬಾ ತಡವಾಗಿ ಗೊತ್ತಾಗಿತ್ತು ಎನ್ನಲಾಗಿದೆ.
ಶನಿವಾರ, 28 ಅಕ್ಟೋಬರ್ 2023
4:24 ಅಪರಾಹ್ನ
Daily PDF
ಭಾರತೀಯ ನೌಕಾಪಡೆಯ 8 ಮಾಜಿ ಉದ್ಯೋಗಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕತಾರ್ ಕೋರ್ಟ್
Authored by:
Tajabi Pathan