* ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಅನುಸರಿಸಲು ರೈತರಿಗೆ ಪ್ರೇರಣೆ ನೀಡಬಲ್ಲಂತಹ ಕಾರ್ಬನ್ ಕ್ರೆಡಿಟ್ (Carbon Credit) ಪ್ರಯೋಗ ಭಾರತದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿದೆ.
* ಹರಿಯಾಣ, ಪಂಜಾಬ್, ಮಹಾರಾಷ್ಟ್ರ , ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ್, ಆಂಧ್ರಪ್ರದೇಶ, ತೆಲಂಗಾಣ ಸೇರಿದ ಎಂಟು ರಾಜ್ಯಗಳ 80,000 ರೈತರಿಗೆ ಕಾರ್ಬನ್ ಕ್ರೆಡಿಟ್ ಪಡೆಯುವ ಅವಕಾಶ ಕೊಡಲಾಗಿದೆ. ಒಟ್ಟು 40,000 ಹೆಕ್ಟೇರ್ ಪ್ರದೇಶವು ಈ ಸ್ಕೀಮ್ನ ವ್ಯಾಪ್ತಿಯಲ್ಲಿದೆ.
* ಮಿತವಾಗಿ ನೀರು ಬಳಕೆ, ಕಡಿಮೆ ಹೊಲ ಉಳುವಿಕೆ, ಡಿಎಸ್ಆರ್ ತಂತ್ರ ಬಳಕೆ, ಮಣ್ಣಿನ ಸಾರ ಉಳಿಸುವಿಕೆ, ನೈಟ್ರೋಜನ್ ಗೊಬ್ಬರ ನಿರ್ವಹಣೆ, ಕೃಷಿ ಅರಣ್ಯ ಇತ್ಯಾದಿ ವಿಧಾನಗಳನ್ನು ಅನುಸರಿಸುವ ರೈತರಿಗೆ ಅಗತ್ಯ ಕಾರ್ಬನ್ ಕ್ರೆಡಿಟ್ ಸಿಗುತ್ತದೆ.
ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ಕಾರ್ಬನ್ ಕ್ರೆಡಿಟ್ : ಎಂಟು ರಾಜ್ಯಗಳ ರೈತರಿಗೆ ಅವಕಾಶ
Published by Yallamma G
25 ಅಕ್ಟೋಬರ್ 2024