* ಭಾರತ ಸರ್ಕಾರ ಸ್ವಾಮ್ಯದ ಸಟ್ಲುಜ್ ಜಲ್ ವಿದ್ಯುತ್ ನಿಗಮ್ (SJVN) ಸಂಸ್ಥೆಯು ನೇಪಾಳದಲ್ಲಿ ತನ್ನ ಎರಡನೇ ಜಲವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲು ನೇಪಾಳ ಸರ್ಕಾರ ನಿರ್ಧರಿಸಿದೆ.
* '669- ಮೆಗಾವ್ಯಾಟ್ ಸಾಮರ್ಥ್ಯದ ಅರುಣ್ ಜಲವಿದ್ಯುತ್ ಕೆಳದಂಡೆ ಯೋಜನೆ' ಕರಡು ಒಪ್ಪಂದಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ರವರ ನೇತೃತ್ವದ ನೇಪಾಳ ಬಂಡವಾಳ ಹೂಡಿಕೆ ಮಂಡಳಿಯು ಅನುಮೋದನೆಯನ್ನು ನೀಡಿತು.
* ಸಟ್ಲುಜ್ ಜಲ್ ವಿದ್ಯುತ್ ನಿಗಮ್ (SJVN)ಸಂಸ್ಥೆಯು ಪೂರ್ವ ನೇಪಾಳದಲ್ಲಿ ಅರುಣ್ ನದಿ ತೀರದಲ್ಲಿ 900 ಮೆಗಾ ವ್ಯಾಟ್‌ನ ಅರುಣ್-3 ಜಲವಿದ್ಯುತ್ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಭಾರತದಿಂದ ಜಲವಿದ್ಯುತ್ ಸ್ಥಾವರ ಅಭಿವೃದ್ಧಿ: ನೇಪಾಳದಿಂದ ಅನುಮೋದನೆ
Published by Yallamma G
30 ಮೇ 2023