* ಭಾರತದ ನಂತರ ಇದೀಗ ಚಂದ್ರನ ಅಂಗಳಕ್ಕೆ ಕಾಲಿಡೋದಕ್ಕೆ ಜಪಾನ್ ರೆಡಿಯಾಗಿದೆ. ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಉಡಾವಣೆ ಮಾಡಿದ್ದ ಬಾಹ್ಯಾಕಾಶ ನೌಕೆ ಚಂದ್ರನನ್ನು ತಲುಪಿದೆ.ಇದೇ ಮೊದಲ ಬಾರಿಗೆ ಚಂದ್ರನ ಅಂಗಳಕ್ಕೆ ಜಪಾನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.
* ಜನವರಿ 19 ಅಥವಾ 20ರಂದು ಸ್ಲಿಮ್ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ. ಲ್ಯಾಂಡ್ ಆದರೆ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆದ ಐದನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗುತ್ತದೆ.
* ಈಗಾಗಲೇ ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತ ಚಂದ್ರನಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿ ಐತಿಹಾಸಿಕ ಸಾಧನೆ ಮಾಡಿವೆ.
* ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿಯ (JAXA) H2-A ರಾಕೆಟ್ ಸುಧಾರಿತ ಇಮೇಜಿಂಗ್ ಉಪಗ್ರಹ ಮತ್ತು ಹಗುರವಾದ ಲ್ಯಾಂಡರ್ ಅನ್ನು ಹೊತ್ತುಕೊಂಡು ದಕ್ಷಿಣ ಜಪಾನ್‌ನ (South Japan) ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನೆಡೆಗೆ ಹೊರಟಿದೆ.
ಶನಿವಾರ, 30 ಡಿಸೆಂಬರ್ 2023
10:20 ಪೂರ್ವಾಹ್ನ
Daily PDF
ಭಾರತದ ನಂತರ ಚಂದ್ರನ ಅಂಗಳಕ್ಕೆ ಕಾಲಿಡೋದಕ್ಕೆ ರೆಡಿಯಾದ ಜಪಾನ್‌ನ SLIM
Authored by:
Yallamma G