* ಗುಜರಾತ್‌ನ ಅಹಮದಾಬಾದ್ ಮತ್ತು ಕಛ್ ಜಿಲ್ಲೆಯ ಭುಜ್ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲಿಗೆ ಸೆಪ್ಟೆಂಬರ್ 16 ರಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
* ಅಹಮದಾಬಾದ್-ಭುಜ್ ವಂದೇ ಮೆಟ್ರೋ ಸೇವೆಯು ಒಂಬತ್ತು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ 360 ಕಿಲೋಮೀಟರ್ ದೂರವನ್ನು 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತದೆ.
* ಸೆಪ್ಟೆಂಬರ್.18ರಿಂದ ಹುಬ್ಬಳ್ಳಿ- ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದಿಂದ ಪ್ರತಿ ಬುಧವಾರ, ಶುಕ್ರವಾರ, ಭಾನುವಾರ ಬೆಳಿಗ್ಗೆ 5 ಗಂಟೆಗೆ ಹೊರಡಲಿದ್ದು, ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ. ಸತಾರಾ, ಸಾಂಗ್ಲಿ, ಮೀರಜ್, ಬೆಳಗಾವಿ, ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
* ಸೆಪ್ಟೆಂಬರ್ .19ರಿಂದ ಪುಣೆ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುಣೆ ರೈಲು ನಿಲ್ದಾಣದಿಂದ ಗುರುವಾರ, ಶನಿವಾರ, ಸೋಮವಾರ ಮಧ್ಯಾಹ್ನ 2.15ಕ್ಕೆ ಹೊರಡಲಿದ್ದು, ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.
* ಈ ಮೆಟ್ರೋ ಯೋಜನೆಯ ಜೊತೆಗೆ ಪುಣೆಯಿಂದ ಹುಬ್ಬಳ್ಳಿ, ನಾಗಪುರದಿಂದ ಸಿಕಂದರಾಬಾದ್, ಕೊಲ್ಲಾಪುರದಿಂದ ಪುಣೆ, ಆಗ್ರಾ ಕ್ಯಾಂಟ್ ದಿಂದ ಬ್ನಾರಾಸ್ ಮತ್ತು ದುರ್ಗ್ ದಿಂದ ವಿಶಾಖಪಟ್ಟಣಂ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಆರಂಭಕ್ಕೂ ಚಾಲನೆ ನೀಡಲಾಗುತ್ತದೆ.
* ವಂದೇ ಭಾರತ್ ಮೆಟ್ರೋದಲ್ಲಿ ವಿಮಾನದಂತಹ ಶೌಚಾಲಯ ವ್ಯವಸ್ಥೆ ಇರಲಿದೆ. ಉದಾಹರಣೆಗೆ ಯಾರಾದರೂ ಶೌಚಾಲಯವನ್ನು ಬಳಸುತ್ತಿದ್ದರೆ, ಅದು ದೂರದಿಂದ ಗೋಚರಿಸುತ್ತದೆ. ಇದಕ್ಕಾಗಿ ಫಲಕಗಳನ್ನು ಅಳವಡಿಸಲಾಗಿದ್ದು, ಶೌಚಾಲಯ ಖಾಲಿ ಇದ್ದಾಗ ಹಸಿರು ಬಣ್ಣದಲ್ಲಿ ಸೂಚನೆ ನೀಡುತ್ತದೆ. ಇದರ ಪ್ರಯೋಜನವೆಂದರೆ ಪ್ರಯಾಣಿಕರು ಶೌಚಾಲಯ ಖಾಲಿ ಇದೆಯೇ ಅಥವಾ ಯಾರಾದರೂ ಹೋಗಿದ್ದಾರೆಯೇ ಎಂದು ದೂರದಿಂದಲೇ ನೋಡಬಹುದಾಗಿದೆ.
ಸೋಮವಾರ, 16 ಸೆಪ್ಟೆಂಬರ್ 2024
12:27 ಅಪರಾಹ್ನ
Daily PDF
ಭಾರತದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ
Authored by:
Bhagya R K