* ಒಮನ್ ನಲ್ಲಿರುವ ಸಲಲದಲ್ಲಿ ಭಾರತ ಮತ್ತು ಒಮನ್ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಸೆಪ್ಟೆಂಬರ್ 13ರಿಂದ ಆರಂಭವಾಗಿರುವ ಸಮರಾಭ್ಯಾಸವು ಸೆಪ್ಟೆಂಬರ್ 26ರ ವರೆಗೆ ನಡೆಯಲಿದೆ.
* ಭಾರತ-ಒಮನ್ ಜಂಟಿ ಮಿಲಿಟರಿ ವ್ಯಾಯಾಮ ಅಲ್ ನಜಾಹ್‌ಗಾಗಿ ಭಾರತವು ತನ್ನ ತುಕಡಿಯನ್ನು ಕಳುಹಿಸಿದೆ. ಒಮಾನ್‌ನ ಸಲಾಲಾದಲ್ಲಿರುವ ರಬ್‌ಕೂಟ್ ತರಬೇತಿ ಪ್ರದೇಶದಲ್ಲಿ ನಡೆಸಲು ನಿರ್ಧರಿಸಲಾಗಿದೆ.
* ಭಾರತೀಯ ಸೇನಾ ತುಕಡಿಯು 60 ಸಿಬ್ಬಂದಿಯನ್ನು ಒಳಗೊಂಡಿದ್ದು ಯಾಂತ್ರೀಕೃತ ಪದಾತಿ ದಳದ ಬೆಟಾಲಿಯನ್ ಪ್ರತಿನಿಧಿಸುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
* ರಾಯಲ್ ಆರ್ಮಿ ಆಫ್ ಓಮನ್ ತುಕಡಿಯು ಸಹ 60 ಸಿಬ್ಬಂದಿಯನ್ನು ಒಳಗೊಂಡಿದೆ. ಇದನ್ನು ಫ್ರಾಂಟಿಯರ್ ಫೋರ್ಸ್‌ನ ಪಡೆಗಳು ಪ್ರತಿನಿಧಿಸುತ್ತವೆ.
* ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡೂ ಕಡೆಯ ಜಂಟಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಜಂಟಿ ಸಮರಾಭ್ಯಾಸದ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.
* ಈ ವ್ಯಾಯಾಮವು ಮರುಭೂಮಿ ಪರಿಸರದಲ್ಲಿ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ಭಾರತ ಮತ್ತು ಒಮನ್ ನಡುವೆ ಪರ್ಯಾಯವಾಗಿ 2015 ರಿಂದ ಅಲ್ ನಜಾಹ್ ವ್ಯಾಯಾಮವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ.
ಸೋಮವಾರ, 16 ಸೆಪ್ಟೆಂಬರ್ 2024
12:35 ಅಪರಾಹ್ನ
Daily PDF
ಭಾರತ-ಒಮನ್ ಜಂಟಿ ಮಿಲಿಟರಿ ವ್ಯಾಯಾಮ ಪ್ರಾರಂಭ
Authored by:
Jyoti Angadi