➤ ಚೆನ್ನೈನಲ್ಲಿ 2026ರ ಜನವರಿ 28-29 ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (NSO) ಅಖಿಲ ಭಾರತ ತರಬೇತುದಾರರ ಕಾರ್ಯಾಗಾರವನ್ನು (AIWOT) ಆಯೋಜಿಸಿದೆ. ಇದು ಏಪ್ರಿಲ್ 2026 ರಿಂದ ಆರಂಭವಾಗಲಿರುವ ರಾಷ್ಟ್ರೀಯ ಹೌಸ್‌ಹೋಲ್ಡ್ ಇನ್‌ಕಮ್ ಸರ್ವೇ (NHIS) ಮತ್ತು ಕಾರ್ಪೊರೇಟ್ ಸೇವಾ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASISSE) ಗಾಗಿ ನಡೆಸಲಾಗುತ್ತಿರುವ ಪೂರ್ವಸಿದ್ಧತಾ ಕಾರ್ಯಕ್ರಮವಾಗಿದೆ. ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಂಕಿಅಂಶಗಳ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ದಶಕಗಳಿಂದ ಇದ್ದ ದತ್ತಾಂಶದ ಕೊರತೆಯನ್ನು ನೀಗಿಸಲು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಎರಡು ಪ್ರಮುಖ ರಾಷ್ಟ್ರವ್ಯಾಪಿ ಸಮೀಕ್ಷೆಗಳಿಗೆ ಚಾಲನೆ ನೀಡುತ್ತಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತಲುಪಲಾಗದ ಕೆಲವು ಹಳ್ಳಿಗಳನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯ
➤ ರಾಷ್ಟ್ರೀಯ ಹೌಸ್‌ಹೋಲ್ಡ್ ಇನ್‌ಕಮ್ ಸರ್ವೇ (NHIS): ಇದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಸಲಾಗುತ್ತಿರುವ ಅಖಿಲ ಭಾರತ ಮಟ್ಟದ ಕುಟುಂಬದ ಆದಾಯದ ಸಮೀಕ್ಷೆಯಾಗಿದೆ. ದೇಶದ ಜನರ ಜೀವನ ಮಟ್ಟ ಮತ್ತು ಆದಾಯದ ಹಂಚಿಕೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವುದು.
=> ಇದು ಆದಾಯದ ಮಾದರಿಗಳು, ಕಾರ್ಮಿಕ ಶಕ್ತಿ, ಬಂಡವಾಳ ಮತ್ತು ಭೂಮಿಯಿಂದ ಬರುವ ಆದಾಯದ ನಡುವಿನ ಸಂಬಂಧವನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ.
=> ಸರ್ಕಾರದ ಕಲ್ಯಾಣ ಯೋಜನೆಗಳು (Targeted Interventions) ಅರ್ಹರಿಗೆ ತಲುಪುವಂತೆ ಮಾಡಲು ಈ ದತ್ತಾಂಶ ಸಹಕಾರಿ.
=> ಕುಟುಂಬಗಳ ನಡುವಿನ ಮತ್ತು ವಿವಿಧ ಪ್ರದೇಶಗಳ ನಡುವಿನ ಆದಾಯದ ಅಸಮಾನತೆಯನ್ನು ಹೋಲಿಕೆ ಮಾಡಲು ಇದು ಅವಕಾಶ ನೀಡುತ್ತದೆ.
➤ ಕಾರ್ಪೊರೇಟ್ ಸೇವಾ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASISSE): ಭಾರತದ ಜಿಡಿಪಿಗೆ ಸಿಂಹಪಾಲು ನೀಡುವ ಸೇವಾ ವಲಯದ ದತ್ತಾಂಶಗಳನ್ನು ಕ್ರೋಢೀಕರಿಸಲು ಈ ಸಮೀಕ್ಷೆ ವಿನ್ಯಾಸಗೊಳಿಸಲಾಗಿದೆ. ದೇಶದ ಸಾಂಸ್ಥಿಕ (Incorporated) ಸೇವಾ ವಲಯದ ಬಗ್ಗೆ ಸಮಗ್ರ ಡೇಟಾಬೇಸ್ ಸಿದ್ಧಪಡಿಸುವುದು.
=> ಇದು ಕೇವಲ ನೋಂದಾಯಿತ ಅಥವಾ ಕಾರ್ಪೊರೇಟ್ ಸೇವಾ ಸಂಸ್ಥೆಗಳನ್ನು ಮಾತ್ರ ಒಳಗೊಂಡಿರುತ್ತದೆ.
=> ಒಟ್ಟು ಮೌಲ್ಯವರ್ಧನೆ (GVA), ಸ್ಥಿರ ಬಂಡವಾಳ, ಉದ್ಯೋಗಾವಕಾಶ ಮತ್ತು ವೇತನಗಳ ಬಗ್ಗೆ ರಾಜ್ಯ ಮತ್ತು ಉದ್ಯಮ ಮಟ್ಟದ ಅಂದಾಜುಗಳನ್ನು ಇದು ನೀಡುತ್ತದೆ.
=> ಈ ಸಮೀಕ್ಷೆಯು GSTN (Goods and Services Tax Network) ಚೌಕಟ್ಟನ್ನು ಬಳಸಿಕೊಂಡು ಉದ್ಯಮ-ಆಧಾರಿತ ವಿಧಾನವನ್ನು ಅನುಸರಿಸುತ್ತದೆ.
➤ ಚೆನ್ನೈನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಭಾಗವಹಿಸುವ ಅಧಿಕಾರಿಗಳು 'ಮಾಸ್ಟರ್ ಟ್ರೈನರ್ಸ್' ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಮುಂದೆ ಪ್ರಾದೇಶಿಕ ಮಟ್ಟದಲ್ಲಿ ತರಬೇತಿ ನೀಡಲಿದ್ದಾರೆ. ಈ ಸಮೀಕ್ಷೆಯು ಸಂಪೂರ್ಣ ಡಿಜಿಟಲ್ ಆಗಿರುವುದರಿಂದ ದತ್ತಾಂಶದ ನಿಖರತೆ ಮತ್ತು ಗುಣಮಟ್ಟ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಮೀಕ್ಷೆಯ ತಾಂತ್ರಿಕ ತಂಡದ ನೇತೃತ್ವವನ್ನು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಸುರ್ಜಿತ್ ಎಸ್. ಭಲ್ಲಾ ಅವರು ವಹಿಸಿದ್ದಾರೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.