* ಭಾರತದ ಹಿರಿಯ ಟೆಸ್ಟ್ ಆಟಗಾರ ದತ್ತಾಜಿರಾವ್ ಗಾಯಕ್ವಾಡ್(95) ಅವರು ಫೆ.13 ರಂದು ಗುಜರಾತ್ನ ಬರೋಡಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. 1950ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಇವರು ಮುನ್ನಡೆಸಿದ್ದರು.
* ಗಾಯಕ್ವಾಡ್ 1938ರ ಅಕ್ಟೋಬರ್ 27ರಂದು ಜನಿಸಿದರು. 11 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಇವರು 1959ರಲ್ಲಿ ಭಾರತ ತಂಡದ ಕ್ಯಾಪ್ಟನ್ ಆದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ ಅಂತಿಮ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
* ಒಟ್ಟು 110 ಪ್ರಥಮ ದರ್ಜೆ ಪಂದ್ಯಗಳನ್ನಾಡಿ, 5,788 ರನ್‌ಗಳನ್ನು ಪೇರಿಸಿದ್ದರು. ಇದರಲ್ಲಿ 17 ಶತಕಗಳು ಮತ್ತು 23 ಅರ್ಧಶತಕಗಳು ಸೇರಿವೆ. ಈ ಪೈಕಿ ರಣಜಿ ಫೈನಲ್ ಪಂದ್ಯದಲ್ಲಿ ಸಿಡಿಸಿದ ಶತಕವೂ ಸೇರಿದೆ. ಅಲ್ಲದೇ, ಮಹಾರಾಷ್ಟ್ರ ವಿರುದ್ಧ ಅಜೇಯ 249 ರನ್ ಸಿಡಿಸಿದ ದಾಖಲೆಯನ್ನು ಇವರು ಹೊಂದಿದ್ದಾರೆ. ಇದರೊಂದಿಗೆ ಎರಡು ಬಾರಿ ದ್ವಿಶತಕವನ್ನೂ ಬಾರಿಸಿದ್ದಾರೆ.
ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ
Published by Yallamma G
14 ಫೆಬ್ರವರಿ 2024