* ಕ್ರೋಲ್ಸ್ ಕನ್ಸಲ್ವೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರಿಟಿ ಆಗಿ ಹೊರಹೊಮ್ಮಿದ್ದಾರೆ.
* ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ವಿರಾಟ್ ಕೊಹ್ಲಿಅವರು ಮರಳಿ ಅಗ್ರಸ್ಥಾನ ಪಡೆದಿದ್ದಾರೆ. ಈ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.
* 2020ನೇ ಸಾಲಿನಲ್ಲಿ ಕೊಹ್ಲಿ ಅವರ ಬ್ರಾಂಡ್ ಮೌಲ್ಯ ₹2,000 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಬ್ರಾಂಡ್ ಮೌಲ್ಯದಲ್ಲಿ ಕೊಂಚ ಇಳಿಕೆಯಾಗಿ ₹1,900 ಕೋತಿ ಆಗಿತ್ತು. 2022 ₹1,474 ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದರು ಕೊಹ್ಲಿ ಒಂದೇ ವರ್ಷದಲ್ಲಿ ಮೌಲ್ಯದಲ್ಲಿ ಶೇ 29ರಷ್ಟು ಜಿಗಿತ ಕಂಡಿ ದುಬಾರಿ ತಾರೆ ಎನಿಸಿಕೊಂಡಿದ್ದಾರೆ.
* ಬಾಲಿವುಡ್ ನಟ ಶಾರುಕ್ ಖಾನ್ ಅವರು 2022ರಲ್ಲಿ ₹464 ಕೋಟಿ ಬ್ರಾಂಡ್ ಮೌಲ್ಯ ಹೊಂದುವ ಮೂಲಕ 10ನೇ ಸ್ಥಾನದಲ್ಲಿದ್ದರು.
* ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿ
1. ವಿರಾಟ್ ಕೊಹ್ಲಿ ಬ್ರಾಂಡ್ ಮೌಲ್ಯ ₹1900 ಕೋಟಿ
2. ರಣವೀರ್ ಸಿಂಗ್ ಬ್ರಾಂಡ್ ಮೌಲ್ಯ ₹1692 ಕೋಟಿ
3. ಶಾರುಕ್ ಖಾನ್ ಬ್ರಾಂಡ್ ಮೌಲ್ಯ ₹1,000 ಕೋಟಿ
4. ಅಕ್ಷಯ್ ಕುಮಾರ್ ಬ್ರಾಂಡ್ ಮೌಲ್ಯ ₹930 ಕೋಟಿ
5. ಆಲಿಯಾ ಭಟ್ ಬ್ರಾಂಡ್ ಮೌಲ್ಯ ₹842 ಕೋಟಿ
6. ದೀಪಿಕಾ ಪಡುಕೋಣೆ ಬ್ರಾಂಡ್ ಮೌಲ್ಯ ₹800
7. ಎಂ.ಎಸ್. ದೋನಿ ಬ್ರಾಂಡ್ ಮೌಲ್ಯ ₹798 ಕೋಟಿ
8. ಸಚಿನ್ ತೆಂಡೂಲ್ಕರ್ ಬ್ರಾಂಡ್ ಮೌಲ್ಯ ₹760 ಕೋಟಿ
10. ಸಲ್ಮಾನ್ ಖಾನ್ ಬ್ರಾಂಡ್ ಮೌಲ್ಯ ₹680 ಕೋಟಿ
12. ಕಿಯಾರ ಅಡ್ವಾಣಿ 12ನೇ ಸ್ಥಾನ
25. ಕತ್ರಿನಾ ಕೈಫ್ 25ನೇ ಸ್ಥಾನದಲ್ಲಿದ್ದಾರೆ.
ಬುಧವಾರ, 19 ಜೂನ್ 2024
10:56 ಪೂರ್ವಾಹ್ನ
Daily PDF
ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ : ವಿರಾಟ್ ಕೊಹ್ಲಿಗೆ ಅಗ್ರ ಸ್ಥಾನ
Authored by:
Yallamma G