* ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್ನಲ್ಲಿ ಶುಕ್ರವಾರ (ಆ 23) ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಸ್ವಾಗತಿಸಿದರು. ಭಾರತ ಮತ್ತು ಉಕ್ರೇನ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಕೃಷಿ, ಆಹಾರೋದ್ಯಮ, ಔಷಧ, ಸಂಸ್ಕೃತಿ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ನಾಲ್ಕು ಒಪ್ಪಂದಗಳು ಸಹಕಾರ ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಯುದ್ಧ ಪೀಡಿತ ದೇಶದಲ್ಲಿ ಪ್ರಧಾನಿ ಮೋದಿ ರಾಜಧಾನಿ ಕೀವ್ ಗೆ ಐತಿಹಾಸಿಕ ಭೇಟಿ ನೀಡಿದ್ದು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
* 1991 ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಭೇಟಿ ನೀಡಿದಂತಾಗಿದೆ. ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರದೇಶದಲ್ಲಿ ಕೀವ್ ನಲ್ಲಿ ಮಿಲಿಟರಿ ಆಕ್ರಮಣದ ನಡುವೆ ಪ್ರಧಾನಿ ಮೋದಿ ಅವರು ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರ ಭೇಟಿ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಶನಿವಾರ, 24 ಆಗಸ್ಟ್ 2024
10:48 ಪೂರ್ವಾಹ್ನ
Daily PDF
ಭಾರತ-ಉಕ್ರೇನ್ ನಡುವೆ 'ನಾಲ್ಕು ಒಪ್ಪಂದ'ಗಳಿಗೆ ಸಹಿ
Authored by:
Yallamma G