* ಫಿಜಿಯ ಪ್ರಧಾನಿ ಸಿತಿವೇನಿ ಲಿಗಮಮಾಡ ಬರಬುಕಾ ಅವರು ಸೋಮವಾರ(ಆಗಸ್ಟ್ 25) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
* ಈ ಸಂದರ್ಭದಲ್ಲಿ ಭಾರತ–ಫಿಜಿ ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು ಮತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
* ಭಾರತ ಮತ್ತು ಫಿಜಿ ದೂರದಲ್ಲಿದ್ದರೂ ಉಭಯರ ಆಸೆಗಳು ಒಂದೇ. ರಕ್ಷಣಾ–ಭದ್ರತಾ ಸಹಕಾರಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು.
* ಇಂಡೋ–ಪೆಸಿಫಿಕ್ ಪ್ರದೇಶವು ಒಳಗೊಂಡ, ಸುರಕ್ಷಿತ ಮತ್ತು ಸಮೃದ್ಧವಾಗಿರಬೇಕು ಎಂಬುದು ಉಭಯ ರಾಷ್ಟ್ರಗಳ ಗುರಿ.
* ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ಕರಾವಳಿ ಭದ್ರತೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ಫಿಜಿಯೊಂದಿಗೆ ಭಾರತ ತನ್ನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ತೀರ್ಮಾನಿಸಿದೆ.
ಭಾರತ–ಫಿಜಿ ರಕ್ಷಣಾ ಸಹಕಾರಕ್ಕೆ ಹೊಸ ಒಪ್ಪಂದ
Published by Jyoti Angadi
27 ಆಗಸ್ಟ್ 2025