* ಬ್ರಿಟನ್‌ನಲ್ಲಿ ಯುವ ವಿಜ್ಞಾನಿಗಳಿಗೆ ನೀಡುವ ಪ್ರತಿಷ್ಠಿತ 'ದಿ ಬ್ರವ್ಯಾಟ್ರಿಕ್ ಪ್ರಶಸ್ತಿ'ಗೆ ಭಾರತ ಮೂಲದ ಪ್ರೊ. ರಾಹುಲ್ ಆರ್. ನಾಯರ್, ಮೆಹುಲ್ ಮಲಿಕ್ ಹಾಗೂ ತನ್ಮಯ್ ಭರತ ಸೇರಿದಂತೆ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ.
* ರಾಹುಲ್ ಆರ್. ನಾಯರ್, ಮೆಹುಲ್ ಮಲಿಕ್ ಹಾಗೂ ತನ್ಮಯ್ ಭರತ್ ಸೇರಿದಂತೆ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ. ರಸಾಯನ ಶಾಸ್ತ್ರ, ಭೌತವಿಜ್ಞಾನ, ಎಂಜಿನಿಯರಿಂಗ್ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
* ರಸಾಯನ ಶಾಸ್ತ್ರ, ಭೌತವಿಜ್ಞಾನ, ಎಂಜಿನಿಯರಿಂಗ್ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
* 2024 ಫೆಬ್ರುವರಿ 27ರಂದು ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ 'ದಿ ಬ್ರವ್ಯಾಟ್ರಿಕ್ ಪ್ರಶಸ್ತಿ' ಪ್ರದಾನ ನಡೆಯಲಿದೆ.
* ಈ ಪ್ರಶಸ್ತಿಯು 4.8 ಲಕ್ಷ ಪೌಂಡ್ (ಅಂದಾಜು ₹5.7 ಕೋಟಿ) ನಗದು ಬಹುಮಾನವನ್ನು ಒಳಗೊಂಡಿದೆ.
* ಭಾರತೀಯರಾದ ನಾಯರ್ ಅವರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನಿಯಾಗಿದ್ದಾರೆ. ಮಲಿಕ್ ಅವರು ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯ ದಿಂದ ಹಾಗೂ ತನ್ಮಯ್ ಅವರು ಇಂಗ್ಲೆಂಡ್‌ನ ಎಂಆರ್‌ಸಿ 'ಲ್ಯಾಬೊರೇಟರಿ ಆಫ್ ಮಾಲಿಕ್ಯುಲರ್ ಬಯಾಲಜಿ' ಸಂಸ್ಥೆಯಿಂದ ಪಿಎಚ್.ಡಿ ಪಡೆದಿದ್ದಾರೆ.
* 2024ರ ಸಾಲಿನ ಪ್ರಶಸ್ತಿಗೆ 40 ಸಂಶೋಧನಾ ಸಂಸ್ಥೆಗಳಿಂದ 84 ನಾಮನಿರ್ದೇಶನಗಳು ಬಂದಿದ್ದವು ಎಂದು ಪ್ರಶಸ್ತಿ ನೀಡುವ ಬವ್ಯಾಟ್ರಿಕ್ ಕುಟುಂಬ ಪ್ರತಿಷ್ಠಾನ ಮತ್ತು ದಿ ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆ ಹೇಳಿದೆ.
ಗುರುವಾರ, 25 ಜನವರಿ 2024
5:23 ಅಪರಾಹ್ನ
Daily PDF
ಭಾರತ ಮೂಲದ 3 ಯುವ ವಿಜ್ಞಾನಿಗಳಿಗೆ ಬ್ಲವ್ಯಾಟ್ನಿಕ್ ಪ್ರಶಸ್ತಿ
Authored by:
Yallamma G