* BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ದೀಪಿಕಾ ಭಾಗಿಯಾಗಿದ್ದಾರೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ರೆಡ್ ಕಾರ್ಪೆಟ್‌ನಲ್ಲಿ ತಾರೆಯರು ಗೌನ್ ಅಥವಾ ತಮ್ಮದೇ ರೀತಿಯ ಫ್ಯಾಷನ್ ಉಡುಗೆಗಳನ್ನು ಧರಿಸುತ್ತಾರೆ.
* BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೊದಲ ಭಾರತೀಯ ತಾರೆ ಎನ್ನುವ ಹೆಗ್ಗಳಿಕೆ ದೀಪಿಕಾ ಪಡುಕೋಣೆ ಅವರ ಪಾಲಾಗಿದೆ.
* ದೀಪಿಕಾ BAFTA ಕಾರ್ಯಕ್ರಮಕ್ಕೆ ಮೊದಲ ಬಾರಿ ಹೋದರೂ ತನ್ನ ನೆಚ್ಚಿನ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ ಸೀರೆಯನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ. ನಿರೂಪಣೆ ವೇಳೆಯೂ ಸೀರೆ ಧರಿಸಿ ನಿಂತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
* ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದ 77ನೇ BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ಟೋಫರ್ ನೋಲನ್ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ ‘ಓಪನ್ ಹೈಮರ್’ ಏಳು ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
* ಪೋರ್ ಥಿಂಗ್ಸ್ ಚಿತ್ರದಲ್ಲಿನ ನಟನೆಗಾಗಿ ಎಮ್ಮಾ ಸ್ಟೋನ್ ಅವರು ಶೇಷ್ಠ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಇನ್ನುಳಿದಂತೆ, ಅತ್ಯುತ್ತಮ ಬ್ರಿಟಿಷ್ ಚಿತ್ರವಾಗಿ crab day ಹಾಗೂ ಕಿರು ಚಿತ್ರ- ಜೆಲ್ಲಿ ಫಿಶ್ ಮತ್ತು ಲ್ಯಾಬ್‌ಸ್ಟರ್ ಪ್ರಶಸ್ತಿ ಪಡೆದಿದೆ.
* ತನ್ನ ನಟನಾ ಕೌಶಲ್ಯ ಮತ್ತು ಕಿಲ್ಲರ್ ಲುಕ್‌ನಿಂದಾಗಿ ದೀಪಿಕಾ ಬಾಲಿವುಡ್‌ನಿಂದ ಹಾಲಿವುಡ್‌ಗೆ ಚಿತ್ರಗಳಲ್ಲಿ ತನ್ನ ಹೆಸರು ಗಳಿಸಿದ್ದಾರೆ. ಇದೀಗ ದೀಪಿಕಾ ಮತ್ತೊಮ್ಮೆ ತಮ್ಮ ಪ್ರತಿಭೆಯಿಂದ ದೇಶಕ್ಕೆ ಕೀರ್ತಿ ಇಮ್ಮಡಿಗೊಳಿಸಿದ್ದಾರೆ. ಅವಾರ್ಡ್ಸ್ ಕಾರ್ಯಕ್ರಮದಲ್ಲಿ ದೀಪಿಕಾ, ಇಬ್ಬನಿ ಮೇಕ್ಅಪ್ ಮತ್ತು ಕೊಹ್ಲ್-ರಿಮ್ಡ್ ಕಣ್ಣುಗಳೊಂದಿಗೆ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ.
ಬುಧವಾರ, 21 ಫೆಬ್ರುವರಿ 2024
4:22 ಅಪರಾಹ್ನ
Daily PDF
BAFT ಫಿಲ್ಮ್ ಅವಾರ್ಡ್ 2024: ನಿರೂಪಕಿಯಾಗಿ ಮಿಂಚಿದ ದೀಪಿಕಾ ಪಡುಕೋಣೆ
Authored by:
Akshata Halli