* ಕಳೆದ 3 ವರ್ಷಗಳಲ್ಲಿ ಭಾರತದಾದ್ಯಂತ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶಗಳು ಬಾಲ್ಯವಿವಾಹ ನಡೆದ ಟಾಪ್-5 ರಾಜ್ಯಗಳಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿದೆ.
* ‘ಬಾಲ್ಯವಿವಾಹಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹೊರಡಿಸಬೇಕು’ ಎಂದು ಕೋರಿ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕಳೆದ 3 ವರ್ಷಗಳಲ್ಲಿ ಬಾಲ್ಯ ವಿವಾಹದ ಘಟನೆಗಳ ಬಗ್ಗೆ ಬೆಚ್ಚಿಬೀಳಿಸುವ ಅಂಕಿಅಂಶಗಳನ್ನು ಮಂಡಿಸಿದರು.
* ಸ್ವಯಂಸೇವಾ ಸಂಸ್ಥೆಯ ವಕೀಲರು ‘ಬಾಲ್ಯವಿವಾಹದ ಆರೋಪಿಗಳ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಆಗುತ್ತಿಲ್ಲ. ರಾಜ್ಯಗಳು ಸರಿಯಾದ ಅಂಕಿ-ಅಂಶ ನೀಡುತ್ತಿಲ್ಲ’ ಎಂದರು ಹಾಗೂ ಬಾಲ್ಯವಿವಾಹ ತಡೆಗೆ ಪ್ರಭಾರ ಅಧಿಕಾರಿಗಳ ಬದಲು, ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಕೋರಿದರು.
* ಈ ಸಾಮಾಜಿಕ ಅನಿಷ್ಟದ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಬಲಪಡಿಸಲು ನಾವು ಯಾವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ನೀಡಬಹುದು ಎಂಬ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತು.
* ಭಾರತದ ಟಾಪ್ 10 ರಾಜ್ಯಗಳ ಪಟ್ಟಿ :
1. ತಮಿಳುನಾಡು 8966
2. ಕರ್ನಾಟಕ 8348
3. ಪಶ್ಚಿಮ ಬಂಗಾಳ 8324
4. ತೆಲಂಗಾಣ 4440
5. ಆಂಧ್ರಪ್ರದೇಶ 3416
6. ಅಸ್ಸಾಂನಲ್ಲಿ 3316
7. ಮಹಾರಾಷ್ಟ್ರದಲ್ಲಿ 2043
8. ಗುಜರಾತ್‌ನಲ್ಲಿ 1206
9. ಉತ್ತರ ಪ್ರದೇಶದಲ್ಲಿ 1197
10. ಹರ್ಯಾಣದಲ್ಲಿ 1104
ಬಾಲ್ಯವಿವಾಹದಲ್ಲಿ ದೇಶದಲ್ಲೇ ಕರ್ನಾಟಕ ನಂ.2
Published by Yallamma G
13 ಜುಲೈ 2024