* ಬಾಹ್ಯಾಕಾಶ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ ಮಾರ್ಗಸೂಚಿಗಳಿಗೆ ಭಾರತ ಸರ್ಕಾರ 2024 ಫೆಬ್ರವರಿ 22ರಂದು ತಿದ್ದುಪಡಿಗಳನ್ನು ಮಾಡಿದೆ. 
* ಉಪಗ್ರಹ ಉತ್ಪಾದನೆ, ಉಡಾವಣಾ ವಾಹನಗಳ (ಲಾಂಚ್ ವೆಹಿಕಲ್) ನಿರ್ಮಾಣ ಮತ್ತು ಭೂ (ಗ್ರೇಂಡ್) ಮೂಲಸೌಕರ್ಯಗಳ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ವಿದೇಶಗಳಿಂದ ಹೆಚ್ಚು ಬಂಡವಾಳ ತಿದ್ದುಪಡಿಯ ಉದ್ದೇಶವಾಗಿದೆ.
* ಶೇ.100 ಎಫ್‌ಡಿಐ ಉಪಗ್ರಹಗಳ ಬಿಡಿಭಾಗಗಳು ಸಿಸ್ಟಮ್‌ಗಳು ಅಥವಾ ಉಪ-ಸಿಸ್ಟಮ್‌ಗಳು ಮುಂತಾದ ವಿಭಾಗಗಳಲ್ಲಿ ಶೇಕಡ 100ರಷ್ಟು ವಿದೇಶಿ ಬಂಡವಾಳ ಹೂಡುವ ನೀತಿಗೆ ಕೇಂದ್ರ ಸಚಿವ ಸಂಪುಟ ಅಸ್ತು ತಿಳಿಸಿದೆ.
* ಶೇ.74 ಉಪಗ್ರಹ ಉತ್ಪಾದನೆ ಮತ್ತು ಕಾರ್ಯಾಚರಣೆ ವಲಯದಲ್ಲಿ ಶೇ. 74  ಕ್ಕಿಂತ ಹೆಚ್ಚು ಚಟುವಟಿಕೆಗಳು ಸರ್ಕಾರದ ವ್ಯಾಪ್ತಿಯಲ್ಲಿವೆ.
* ಹವಾಮಾನ ಉಪಗ್ರಹವಾದ ಇನ್ಸಾಟ್ - 3ಡಿಎಸ್ ಅನ್ನು ಇಸ್ರೋ ಉಡಾವಣೆ ಮಾಡಿದೆ. GSLV F14 ರಾಕೆಟ್ ಸಹಾಯದಿಂದ ಉಡಾವಣೆ ಮಾಡಲಾಗಿದೆ.
* ಶೇ. 49 ಲಾಂಚ್ ವೆಹಿಕಲ್‌ಗಳು ಮತ್ತು ತತ್ಸಂಬಂಧಿ ವ್ಯವಸ್ಥೆಗಳ ಅಭಿವೃದ್ಧಿ. 
* ಸ್ಯಾಟಲೈಟ್​ ಬಿಡಿಭಾಗಗಗಳ ತಯಾರಿಕೆಯಲ್ಲಿ ಶೇಕಡಾ 100 ರಷ್ಟು ವಿದೇಶ ನೇರ ಬಂಡವಾಳ ಹೂಡಿಕೆ(ಎಫ್​ಡಿಐ) ಗೆ  ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 6 ರಂದು  ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
* ಉದ್ಯೋಗ ಸೃಷ್ಟಿ- ತಂತ್ರಜ್ಞಾನ ಬೆಳವಣಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದ (ಎಫ್​ಡಿಐ) ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಿ ವಿಶ್ವದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ವಿಸ್ತರಣೆ ಪಡೆಯಲಿದೆ.