* ಸೋಮವಾರ (ಜ.22) ರಂದು ಅಭಿಜಿತ್ ಮುಹೂರ್ತದಲ್ಲಿ ಮಧ್ಯಾಹ್ನ 12.20ಕ್ಕೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ, ಸಂಭ್ರಮ ಮನೆ ಮಾಡಿದೆ.
*  ಇಡೀ ವಿಶ್ವದ ಚಿತ್ರ ಅಯೋಧ್ಯೆಯತ್ತ ನೆಟ್ಟಿದ್ದು, 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮ ವಿಗ್ರಹ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಷ್ಟ್ರದ ಗಣ್ಯರು, ಸ್ವಾಮೀಜಿಗಳು, ಯತಿಗಳು, ಆದಿವಾಸಿಗಳು ಸಾಕ್ಷಿಯಾಗಲಿದ್ದಾರೆ.
* ಇಂದು (ಜ.22)ಸರ್ವಾರ್ಥ ಸಿದ್ದಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ರವಿ ಯೋಗ ಎಂಬ ಮೂರು ಯೋಗಗಳು ರೂಪುಗೊಳ್ಳುತ್ತಿವೆ. ಶ್ರೀರಾಮನು ಈ ಯೋಗದಲ್ಲಿಯೇ ಜನಿಸಿದ್ದಾನೆ ಎಂದು ನಂಬಲಾಗಿದ್ದು, ಪಂಚಾಂಗದ ಪ್ರಕಾರ ಇದೇ ಮೂಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತಿದೆ. 
* ರಾಮನ ಊರಿನ ఎల్ల ಬೀದಿಗಳು, ಗಲ್ಲಿಗಳು ಹೂವುಗಳಿಂದ ಅಲಂಕೃತಗೊಂಡಿವೆ. ಬಿಲ್ಲು-ಬಾಣ ಹಿಡಿದಿರುವ ರಾಮನ ಚಿತ್ರವನ್ನು, ರಾಮಚರಿತ ಮಾನಸದ ಸಾಲುಗಳನ್ನು ನಗರದ ಗೋಡೆಗಳ ಮೇಲೆ ಬರೆಯಲಾಗಿದೆ. ರಾಮಚರಿತಮಾನಸದ ಸಾಲುಗಳ ಪಠಣವು ಇಲ್ಲಿನ ಅಂಗಡಿಗಳು, ದೇವಸ್ಥಾನಗಳು ಹಾಗೂ ಮನೆ ಗಳಿಗೆ ಅಳವಡಿಸಲಾಗಿರುವ ಧ್ವನಿ ವರ್ಧಕಗಳಿಂದ ಕೇಳಿಸುತ್ತಿದೆ.
* ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು 8 ಸಾವಿರ ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
* ಭಾರತದಲ್ಲಿ ಅಪಾರ ಧಾರ್ಮಿಕ ಪ್ರಾಮುಖ್ಯತೆಯ ತಾಣವಾದ ಅಯೋಧ್ಯೆ ರಾಮ ಮಂದಿರವು, ರಾಮ್ ಲಲ್ಲಾ ದೇವರಿಗಾಗಿ ಸೌರಶಕ್ತಿ ಚಾಲಿತ "ಸೂರ್ಯ ತಿಲಕ" ಒಂದು ಅದ್ಭುತ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಉಪಕ್ರಮವು, ಆಧ್ಯಾತ್ಮಿಕತೆಯನ್ನು ವೈಜ್ಞಾನಿಕ ನಾವೀನ್ಯತೆಯೊಂದಿಗೆ ಸಂಯೋಜಿಸುವುದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಸುಸ್ಥಿರ ಆಚರಣೆಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
* "ಸೂರ್ಯ ತಿಲಕ" ಎಂಬುದು ಭಗವಾನ್ ರಾಮನ ವಿಗ್ರಹದ ಹಣೆಯನ್ನು 'ತಿಲಕ' (ಹಣೆಯ ಮೇಲೆ ಧರಿಸಿರುವ ಸಾಂಪ್ರದಾಯಿಕ ಹಿಂದೂ ಗುರುತು) ರೂಪದಲ್ಲಿ ಸೂರ್ಯನ ಬೆಳಕಿನಿಂದ ಅಲಂಕರಿಸಲು ವಿನ್ಯಾಸಗೊಳಿಸಲಾದ ಒಂದು ಚತುರ ವ್ಯವಸ್ಥೆಯಾಗಿದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಭಗವಾನ್ ರಾಮನ ಜನ್ಮವನ್ನು ಗುರುತಿಸುವ ವಾರ್ಷಿಕ ರಾಮ ನವಮಿ ಆಚರಣೆಗಾಗಿ ಪ್ರತ್ಯೇಕವಾಗಿ ಯೋಜಿಸಲಾಗಿದೆ.
* ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಜ್ಜುಗೊಂಡಿರುವ ಇಂದಿನ (ಜ.22) ಕಾರ್ಯಕ್ರಮಗಳು : 
• ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡು ಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ.  
• ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ
• ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ
• ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಅವಾಹನೆ ಮಾಡುತ್ತಾರೆ 
• ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ
• ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿಧ್ವಂಸರು, ಅಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ
• ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ (ಜ.22) ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬಳಸಿ ದೀಪ ಬೆಳಗಿಸಲಾಗುತ್ತದೆ.
* ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ 'ಯಜಮಾನ'ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾ ಗಲಿದ್ದಾರೆ.