* ಪ್ರಪಂಚದಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿರುವ ಟಾಪ್-10 ದೇಶಗಳ ಪಟ್ಟಿಯಲ್ಲಿ ಅಮೇರಿಕ ಅಗ್ರ ಸ್ಥಾನದಲ್ಲಿದೆ. ಭಾರತ 9ನೇ ಸ್ಥಾನವನ್ನು ಪಡೆದುಕೊಂಡಿದೆ.
* ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಸಹಾಯವಾಗಬಹುದು ಅನ್ನೋ ಕಾರಣಕ್ಕೆ ಎಲ್ಲಾ ದೇಶಗಳು ಬಂಗಾರವನ್ನು ಸಂಗ್ರಹಿಸಲು ಬಯಸುತ್ತವೆ. ದೇಶದ ಸೆಂಟ್ರಲ್ ಬ್ಯಾಂಕ್ ನಲ್ಲಿ ಚಿನ್ನದ ನಿಕ್ಷೇಪವನ್ನು ಜಮಾ ಮಾಡುತ್ತವೆ.ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕೂಡ ಚಿನ್ನವನ್ನು ತಮ್ಮ ಆಸ್ತಿಯಾಗಿ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತವೆ.
* ವಾಸ್ತವವಾಗಿ, ರಾಜಕೀಯ ಬದಲಾವಣೆಗಳು ಚಿನ್ನದ ನಿಕ್ಷೇಪಗಳ ಮೇಲೆ ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ, ಹಾಗಾಗಿ ಇದು ಯಾವುದೇ ಇತರ ಆಸ್ತಿಗೆ ಹೋಲಿಸಿದರೆ ಸ್ಥಿರತೆಯನ್ನು ನೀಡುತ್ತದೆ.
* ಯಾವ ದೇಶವು ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿದೆಯೋ ಅದು ಆರ್ಥಿಕವಾಗಿ ಹೆಚ್ಚು ಸದೃಢವಾಗಿದೆ.
* ಅತಿ ಹೆಚ್ಚು ಚಿನ್ನ ದಾಸ್ತಾನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ :
1. ಅಮೆರಿಕ - 8,133 ಟನ್ ಚಿನ್ನ
2. ಜರ್ಮನಿ - 3,351 ಟನ್ ಚಿನ್ನ
3. ಇಟಲಿ - 2452 ಟನ್ ಚಿನ್ನ
4. ಫ್ರಾನ್ಸ್ - 2437 ಟನ್ ಚಿನ್ನ
5. ರಷ್ಯಾ - 2336 ಟನ್ ಚಿನ್ನ
6. ಚೀನಾ - 2246 ಟನ್ ಚಿನ್ನ
7. ಸ್ವಿಡ್ಬರ್ಲೆಂಡ್ - 1040 ಟನ್ ಚಿನ್ನ
8. ಜಪಾನ್ - 846 ಟನ್ ಚಿನ್ನ
9. ಭಾರತ - 831 ಟನ್ ಚಿನ್ನ
10. ನೆದರ್ಲೆಂಡ್ - 612 ಟನ್ ಚಿನ್ನ
ಗುರುವಾರ, 22 ಆಗಸ್ಟ್ 2024
12:08 ಅಪರಾಹ್ನ
Daily PDF
ಅತಿ ಹೆಚ್ಚು ಚಿನ್ನ ದಾಸ್ತಾನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ : ಭಾರತಕ್ಕೆ 9 ನೇ ಸ್ಥಾನ
Authored by:
Yallamma G