* ಅಸ್ಸಾಂ ಸರ್ಕಾರ ಬರಾಕ್ ಕಣಿವೆಯಲ್ಲಿರುವ ಕರೀಂಗಂಜ್ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲಾಗಿದೆ.
* ಅಸ್ಸಾಂ ರಾಜ್ಯಪಾಲರ ಆದೇಶದಂತೆ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಜಿಲ್ಲೆ ಎಂದು ಮರುನಾಮಕರಣ ಮಾಡಿ ಸಾಮಾನ್ಯ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಚಂದ್ರ ಸಾಹು ಅವರು ಅಧಿಸೂಚನೆ ಹೊರಡಿಸಿದ್ದಾರೆ. 'ಶ್ರೀ ಭೂಮಿ' ರವೀಂದ್ರನಾಥ ಟ್ಯಾಗೋರ್ ಅವರಿಂದ ಅನುಮೋದಿಸಲ್ಪಟ್ಟ ಹೆಸರು. ರವೀಂದ್ರನಾಥ್ ಟ್ಯಾಗೋರ್ ಗೌರವಾರ್ಥ ಶ್ರೀ ಭೂಮಿ ಎಂಬ ಹೆಸರನ್ನು ಇಡಲಾಗಿದೆ.
* "100 ವರ್ಷಗಳ ಹಿಂದೆ ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ‘ಶ್ರೀಭೂಮಿ’ ಮಾತಾ ಲಕ್ಷ್ಮಿಯ ನಾಡು ಎಂದು ಬಣ್ಣಿಸಿದ್ದಾರೆ. ಇಂದು ಅಸ್ಸಾಂ ಕ್ಯಾಬಿನೆಟ್ ನಮ್ಮ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
* ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಿತ್ತು.
ಅಸ್ಸಾಂನ ಕರೀಂಗಂಜ್ ಹೆಸರು ಬದಲಾವಣೆ : ಶ್ರೀಭೂಮಿ ಎಂದು ಮರುನಾಮಕರಣ
Published by Yallamma G
22 ನವೆಂಬರ್ 2024