* ಅಂತರಾಷ್ಟ್ರೀಯ ಪುಟ್ ಬಾಲ್ ಆಟಗಾರರನ್ನು ಭಾರತ ದೇಶಕ್ಕೆ ಕೊಡುಗೆಯಾಗಿ ನೀಡಿದ ಖಾನ್ ಕುಟುಂಬದ ಶ್ರೇಷ್ಠ ಫುಟ್ಬಾಲ್ ಆಟಗಾರರಾದ 88 ವರ್ಷ ವಯಸ್ಸಿನ ಅಬ್ದುಲ್ ಲತೀಫ್ ಅವರು ಡಿಸೆಂಬರ್ 12 ರಂದು ಗುವಾಹಟಿಯಲ್ಲಿ ನಿಧನರಾಗಿದ್ದಾರೆ.
* ಬೆಂಗಳೂರು ಮುಸ್ಲಿಮ್ಸ್ ತಂಡದಲ್ಲಿ 1953 ಮತ್ತು 54ರಲ್ಲಿ ಆಡಿದ್ದ ಅವರು ಹಲವು ಗೋಲುಗಳನ್ನು ಹೊಡೆದಿದ್ದರು. ಹಾಗೇ 1955ರಲ್ಲಿ ಅವರು ಎಲ್‌ಆರ್‌ಡಿಇ ತಂಡವನ್ನು ಸೇರಿಕೊಂಡರು.ತದನಂತರ ಅವರು ಕೋಲ್ಕತ್ತದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಆಡಿದ್ದರು.
* 1960ರ ರೋಮ್ ಒಲಿಂಪಿಕ್ ಕೂಟಕ್ಕೆ ಆಯ್ಕೆಯಾಗಿದ್ದ ಅಬ್ದುಲ್ ಲತೀಫ್ ಅವರು ಭಾರತ ತಂಡದ ರಾಷ್ಟ್ರೀಯ ಶಿಬಿರಕ್ಕೂ ಅರ್ಹತೆ ಗಳಿಸಿದ್ದರು.
* ಲತೀಫ್ ಖಾನ್ ಅವರು 1962ರಲ್ಲಿ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಆ ಸಮಯದಲ್ಲಿ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮೈಸೂರು ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಖಾನ್ ಅವರು ಶ್ರೀಲಂಕಾದಲ್ಲಿ ನಡೆದಿದ್ದ ಪೆಂಟಾಗ್ಯುಲರ್ ಟೂರ್ನಿಯಲ್ಲಿ ಸಹ ಆಡಿದ್ದರು.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.