* ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ವಹಾಬ್ ರಿಯಾಜ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸಲಿರುವುದಾಗಿ ಹೇಳಿದ್ದಾರೆ.
* ಪಾಕಿಸ್ತಾನ ತಂಡದ ವೇಗದ ಎಡಗೈ ಬೌಲರ್ ವಹಾಬ್ ರಿಯಾಜ್ ಒಟ್ಟು 156 ಪಂದ್ಯಗಳನ್ನು ಆಡಿ 237 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2019ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.
* ವಹಾಬ್ ರಿಯಾಜ್ ಪಾಕಿಸ್ತಾನದ ಪರ 27 ಟೆಸ್ಟ್ ಪಂದ್ಯಗಳನ್ನಾಡಿ 83 ವಿಕೆಟ್, 91 ಏಕದಿನ ಪಂದ್ಯಗಳನ್ನಾಡಿ 120 ವಿಕೆಟ್ ಹಾಗೂ 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 34 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 63ಕ್ಕೆ 5 ವಿಕೆಟ್, ಏಕದಿನ ಪಂದ್ಯದಲ್ಲಿ 46ಕ್ಕೆ 5 ವಿಕೆಟ್ ಹಾಗೂ ಟಿ20 ಯಲ್ಲಿ 18ಕ್ಕೆ 3 ವಿಕೆಟ್‌ಗಳು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ವಿದಾಯ
Published by Yallamma G
17 ಆಗಸ್ಟ್ 2023