* ಖ್ಯಾತ ಭಾರತೀಯ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಅವರ ಕೊನೆಯ ಅಂತಾರಾಷ್ಟ್ರೀಯ ಕೂಟವಾಗಿರಲಿದೆ.
* 2006ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀಜೇಶ್ ಅವರು ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಿದ್ದರಾಗಿದ್ದಾರೆ. ಈ ಬಾರಿಯೂ ಮೆಡಲ್ ನೊಂದಿಗೆ ವೃತ್ತಿಜೀವನ ಅಂತ್ಯಗೊಳಿಸಲು ಶ್ರೀಜೇಶ್ ಆಶಿಸಿದ್ದಾರೆ.
* 2010 ರ ವಿಶ್ವಕಪ್ ನಲ್ಲಿ ಪಾದಾರ್ಪಣೆ ಮಾಡಿದ ಶ್ರೀಜೇಶ್ ಅವರು 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ, ಜಕಾರ್ತಾ-ಪಾಲೆಂಬಾಂಗ್ನಲ್ಲಿ ಕಂಚಿನ ಪದಕ, 2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡ, ಭುವನೇಶ್ವರದಲ್ಲಿ ನಡೆದ 2019 ರ ಎಫ್‌ಐಎಚ್ ಪುರುಷರ ಸೀರೀಸ್ ಫೈನಲ್ಸ ನಲ್ಲಿ ಚಿನ್ನದ ಪದಕ ವಿಜೇತ ತಂಡ ಮತ್ತು ಬರ್ಮಿಂಗ್ಹ್ಯಾಮ್ 2022 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ತಂಡ ಸೇರಿದಂತೆ ಭಾರತಕ್ಕಾಗಿ ಹಲವಾರು ಸ್ಮರಣೀಯ ಗೆಲುವುಗಳ ಭಾಗವಾಗಿದ್ದಾರೆ.
'ಅಂತಾರಾಷ್ಟ್ರೀಯ ಹಾಕಿ’ಗೆ ‘ಪಿ.ಆರ್ ಶ್ರೀಜೇಶ್’ ವಿದಾಯ
Published by Yallamma G
23 ಜುಲೈ 2024