* ಸುಮಾರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಗೋಲ್ ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ.
* 2024ರ ಟಿ20 ವಿಶ್ವಕಪ್ ನಂತರ ವಿರಾಟ್-ರೋಹಿತ್ ಟಿ20ಗೆ ವಿದಾಯ ಹೇಳಿದ್ದರು. ಈಗ ಪಿಆರ್ ಶ್ರೀಜೇಶ್ ಅವರು ನಿವೃತ್ತಿ ಘೋಷಿಸಿದ್ದಾರೆ.
* 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 8 ರಂದು ಸ್ಪೇನ್ ಅನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ ಈ ಮೂಲಕ ಭಾರತ ಸತತ ಎರಡನೇ ಒಲಿಂಪಿಕ್ಸ್ ಕಂಚಿನ ಪದಕವನ್ನು ಗೆದ್ದುಕೊಂಡತಾಗಿದೆ.
*ನಿವೃತ್ತಿಯ ನಂತರ ಮಾತನಾಡಿದ ಶ್ರೀಜೇಶ್ "ನಾನು ಪ್ರೀತಿ, ಕಾಳಜಿಯನ್ನು ಗೌರವಿಸುತ್ತೇನೆ ಮತ್ತು ಕೆಲವೊಮ್ಮೆ ಕೆಲವು ನಿರ್ಧಾರಗಳು ಕಠಿಣವಾಗಿರುತ್ತದೆ. ಆದರೆ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ" ಎಂದು ಹೇಳಿದರು.
ಅಂತಾರಾಷ್ಟ್ರೀಯ ಹಾಕಿ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ನಿವೃತ್ತಿ ಘೋಷಣೆ
Published by Yallamma G
09 ಆಗಸ್ಟ್ 2024