* ಅಮೆರಿಕದಲ್ಲಿ ಫ್ಲೋರಿಡಾದ ಓರ್ಲಾಂಡೊ ವೈಲ್ಡ್ ಲೈಫ್ ಮೊಸಳೆ ಪಾರ್ಕ್‌ಲ್ಲಿ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಕೂಡಿರುವ ಹಾಗೂ ನೀಲಿ ಕಂಗಳನ್ನು ಹೊಂದಿರುವ ಮೊಸಳೆ ಮರಿ ಜನಿಸಿದೆ. ಈ ಕುರಿತು ಓರ್ಲಾಂಡೊ ವೈಲ್ಡ್ ಲೈಫ್ ಪಾರ್ಕ್ ತನ್ನ ಖಾತೆಯಲ್ಲಿ ಮಾಹಿತಿ ನೀಡಿ ಮೊಸಳೆ ಮರಿಯ ಫೋಟೊಗಳನ್ನು ಹಂಚಿಕೊಂಡಿದೆ.
* ಅಮೆರಿಕದಲ್ಲಿ ಕಂಡು ಬರುವ ಅಲ್ಟಿನೊ (ಬಿಳಿ ಅಥವಾ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಹೊಂದಿರುವ ಮೊಸಳೆಗಳು) ಮೊಸಳೆಗಳ ಚರ್ಮದ ಬಣ್ಣದಲ್ಲಿ ಸಾಮಾನ್ಯವಾಗಿ ವ್ಯತ್ಯಾಸ ಕಂಡು ಬರುತ್ತದೆ. ಅವುಗಳಲ್ಲಿ ಇನ್ನೂ ಚರ್ಮ ಬಿಳಿ ಎನ್ನುವಂತೆ ಕಂಡು ಬರುವ ಮೊಸಳೆಗಳನ್ನು Leucistic ಮೊಸಳೆಗಳು ಎನ್ನುತ್ತಾರೆ.
* ಈ ರೀತಿಯ ಬಿಳಿ ಬಣ್ಣದಿಂದ ಕೂಡಿರುವ ಹಾಗೂ ನೀಲಿ ಕಂಗಳನ್ನು ಹೊಂದಿರುವ ಮೊಸಳೆಗಳು ಜಗತ್ತಿನಲ್ಲಿ ಕೇವಲ 8 ಇವೆ ಎಂದು ಹೇಳಲಾಗಿದೆ.
* ಈ ಮೊಸಳೆ ಮರಿಯು 49 ಸೆಂಟಿ ಮೀಟರ್ ಉದ್ದವಿದೆ ಎಂದು ಫ್ಲೋರಿಡಾದ ಓರ್ಲಾಂಡೊ ವೈಲ್ಡ್ ಲೈಫ್ ಮೊಸಳೆ ಪಾರ್ಕ್ ಸಿಬ್ಬಂದಿ ತಿಳಿಸಿದ್ದಾರೆ.
ಸೋಮವಾರ, 11 ಡಿಸೆಂಬರ್ 2023
4:48 ಅಪರಾಹ್ನ
Daily PDF
ಅಮೆರಿಕದಲ್ಲಿ ಬಿಳಿ ಬಣ್ಣ, ನೀಲಿ ಕಂಗಳನ್ನು ಹೊಂದಿರುವ ಮೊಸಳೆ ಮರಿ ಜನನ
Authored by:
Yallamma G