* ಫ್ಲೋರಿಡಾದ ನಾಯಕರಾದ ಮೈಕೆಲ್ ವಾಲ್ಟ್ಜ್ ಅವರನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ. ಚೀನಾ ಬಗ್ಗೆ ಕಟುವಾದ ನಿಲುವು ಹೊಂದಿರುವ ವಾಲ್ಟ್ಜ್ ಅಮೆರಿಕದ ಇಂಡಿಯನ್ ಕಾಕಸ್‌ನ ಉಪಾಧ್ಯಕರೂ ಆಗಿದ್ದಾರೆ.
* ಭಾರತ-ಅಮೆರಿಕದ ಸಂಬಂಧಗಳಿಗೆ ಬೆಂಬಲಿಸುತ್ತಾ ಬಂದಿರುವ ವಾಲ್ಟ್ಜ್ ಮುಂದೆಯೂ ಭಾರತ-ಅಮೆರಿಕ ಮೈತ್ರಿ ಮುಂದುವರಿಯಲು ಸಹಕರಿಸುವ ನಿರೀಕ್ಷೆಯಿದೆ.
* ಇನ್ನು ಕಟ್ಟಾ ಚೀನಾ ವಿರೋಧಿಯಾಗಿರುವ ಮಾರ್ಕೋ ರುಬಿಯೋ ಅವರನ್ನು ಟ್ರಂಪ್ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
* ಫ್ಲೋರಿಡಾ ಸೆನೆಟರ್ ಮಾರ್ಕೊ ರೂಬಿಯೊ ಯುಎಸ್ ಸ್ಟೇಟ್ ಸೆಕ್ರೆಟರಿಯಾಗಿ ನೇಮಿಸುವ ನಿರೀಕ್ಷೆಯು ಇದೆ. 2006ರಿಂದ 2008ರವರೆಗೆ ಫ್ಲೋರಿಡಾದ ಸ್ಪೀಕರ್ ಆಗಿ ರುಬಿಯೋ ಕಾರ್ಯನಿರ್ವಹಿಸಿದ್ದಾರೆ.
* ವಾಲ್ಟ್ಜ್ US ವಿಶೇಷ ಪಡೆಗಳ ಗ್ರೀನ್ ಬೆರೆಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಚೀನಾವನ್ನು ಎದುರಿಸಲು, ಅವರು ಭಾರತದೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸಲು ಒತ್ತು ನೀಡುತ್ತಿದ್ದಾರೆ.
ಶುಕ್ರವಾರ, 15 ನವೆಂಬರ್ 2024
10:46 ಪೂರ್ವಾಹ್ನ
Daily PDF
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕ್ ವಾಲ್ಟ್ಜ್ ನೇಮಕ
Authored by:
Yallamma G