* ಅರ್ಥಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು ಅಮೇರಿಕಾದ ಆರ್ಥಿಕ ಇತಿಹಾಸಗಾರ್ತಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರಾಗಿರುವ 77 ವರ್ಷದ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
* ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗಿದ್ದು, ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕ್ಲಾಡಿಯಾ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
* ಕ್ಲಾಡಿಯಾ ಗೋಲ್ಡಿನ್ ಅವರು 'ಮಹಿಳಾ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರ ಉತ್ಪಾದನೆಗಳ ಮಾರುಕಟ್ಟೆ' ಬಗೆಗೆ ಮಾಡಿರುವ ವ್ಯಾಪಕ ಸಂಶೋಧನೆ ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ.
* ಮಹಿಳಾ ಕಾರ್ಮಿಕರು, ಗಳಿಗೆಯಲ್ಲಿ ಲಿಂಗ ತಾರತಮ್ಯ, ಆದಾಯ ಸಮಾನತೆ, ತಾಂತ್ರಿಕ ಬದಲಾವಣೆ, ಶಿಕ್ಷಣ, ವಲಸೆ ಸೇರಿದಂತೆ ಅನೇಕ ಆರ್ಥಿಕ ಸಂಗತಿಗಳ ಮೇಲೆ ಸಂಶೋಧನೆ ಮಾಡಿದ್ದಾರೆ.
* 2009ರಲ್ಲಿ ಎಲಿನಾರ್ ಓಸ್ಟ್ರೋಮ್. 2019ರಲ್ಲಿ ಎಸ್ತರ್ ಡುಫ್ಲೋ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಎಂಬ ಗೌರವಕ್ಕೆ ಕ್ಲಾಡಿಯಾ ಗೋಲ್ಡಿನ್ ಪಾತ್ರರಾಗಿದ್ದಾರೆ.
* ಆರ್ಥಿಕ ವಿಜ್ಞಾನಕ್ಕೆ 1969 ರಿಂದ 2022 ರವರೆಗೆ ಒಟ್ಟು 54 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. 92 ಪುರಸ್ಕೃತರ ಪೈಕಿ 25 ಮಂದಿ ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು.
* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ 2022 ರ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ, ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್, ವಿಶೇಷವಾಗಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದಾರೆ. ("ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ") ಲಭಿಸಿದೆ.
ಮಂಗಳವಾರ, 10 ಅಕ್ಟೋಬರ್ 2023
10:56 ಪೂರ್ವಾಹ್ನ
Daily PDF
ಅಮೆರಿಕಾದ ಕ್ಲಾಡಿಯಾ ಗೋಲ್ಡಿನ್ ಗೆ ಅರ್ಥಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿ ಘೋಷಣೆ
Authored by:
Bhagya R K