* ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್ನಲ್ಲಿ ಜನೆವರಿ 15 ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ನೂತನ ವಿಶ್ವ ಸುಂದರಿ ಕಿರೀಟ ಧರಿಸಿದರು.
* 71 ನೇ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಸ್ ಇಂಡಿಯಾ-ಯೂನಿವರ್ಸ್ ದಿವಿತಾ ರೈ ಅವರು ಅಗ್ರ 16 ರಲ್ಲಿ ಸ್ಥಾನ ಪಡೆದರು ಆದರೆ ಅಗ್ರ 5 ರೊಳಗೆ ಪ್ರವೇಶಿಸಲು ವಿಫಲರಾದರು. ಗೇಬ್ರಿಯಲ್ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿದ್ದು, ಉತ್ತರ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಫ್ಯಾಶನ್ ಡಿಸೈನ್ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.
* ಗೇಬ್ರಿಯಲ್ ತನ್ನದೇ ಆದ ಪರಿಸರ ಸ್ನೇಹಿ ಉಡುಪುಗಳ ಕಂಪನಿ ಸಹ ನಡೆಸುತ್ತಿದ್ದಾರೆ. ಮಿಸ್ ವೆನೆಜುವೆಲಾ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಆದರು. ಡೊಮಿನಿಕನ್ ರಿಪಬ್ಲಿಕ್ನ ಆಂಡ್ರೀನಾ ಮಾರ್ಟಿನೆಜ್ ಫೌನಿಯರ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು, 11 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಾದವರು ವಿಶ್ವ ಸುಂದರಿ ಕಿರೀಟವನ್ನು ಪಡೆದರು.
ಅಮೇರಿಕಾದ ಆರ್' ಬೋನಿ ಗೇಬ್ರಿಯಲ್ ರವರಿಗೆ ಭುವನ ಸುಂದರಿ ಪಟ್ಟ
Published by Yallamma G
16 ಜನವರಿ 2023