* ಭಾರತೀಯ ರಿಸರ್ವ್ ಬ್ಯಾಂಕ್ ( RBI) ಕಳೆದ ಅಕ್ಟೋಬರ್‌ನಲ್ಲಿ ಮತ್ತೆ 27 ಟನ್ ಚಿನ್ನ ಖರೀದಿಸಲಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ ತಿಳಿಸಿದೆ. ಈ ಮೂಲಕ ಅತಿ ಹೆಚ್ಚು ಚಿನ್ನ ಖರೀದಿಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದೆ.
* ಚಿನ್ನವನ್ನು ತುರ್ತು ಸಂದರ್ಭಗಳ ವಿಮೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಹಣದ ಅವಶ್ಯಕತೆ ಎದುರಾದಾಗ ಚಿನ್ನವನ್ನು ತತ್‌ಕ್ಷಣದಲ್ಲೇ ನಗದೀಕರಿಸಿಕೊಳ್ಳಬಹುದಾಗಿದೆ.
* ಆರ್‌ಬಿಐನಂತಹ ಕೇಂದ್ರ ಬ್ಯಾಂಕ್‌ಗಳು ಟನ್ ಗಳ ಲೆಕ್ಕದಲ್ಲಿ ಚಿನ್ನ ಖರೀದಿಸುತ್ತಿವೆ. ವಿವಿಧ ದೇಶಗಳಲ್ಲಿನ ಕೇಂದ್ರೀಯ ಬ್ಯಾಂಕುಗಳು ತಮ್ಮ ಚಿನ್ನದ ಮೀಸಲನ್ನು ಹೆಚ್ಚಿಸುತ್ತಿದ್ದು, ಎಷ್ಟು ಸಾಧ್ಯವೋ ಅಷ್ಟು ಚಿನ್ನ ಖರೀದಿಸುತ್ತಿವೆ.
* ಒಟ್ಟಾರೆಯಾಗಿ ಕೇಂದ್ರೀಯ ಬ್ಯಾಂಕ್‌ಗಳು ಅಕ್ಟೋಬರ್ ತಿಂಗಳಲ್ಲಿ 60 ಟನ್ ಚಿನ್ನ ಖರೀದಿಸಿವೆ.
* ಆರ್‌ಬಿಐ ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೊಬರ್ ವರೆಗೆ ಒಟ್ಟು 77 ಟನ್ ಚಿನ್ನ ಖರೀದಿಸಿದೆ ಎಂದು ವಿಶ್ವ ಚಿನ್ನ ಸಮಿತಿ (WGC) ವರದಿ ಗುರುವಾರ (ಡಿಸೆಂಬರ್ 05) ರಂದು ತಿಳಿಸಿದೆ.
* 2023 ರ ಅವಧಿಗೆ ಹೋಲಿಸಿದರೆ ಖರೀದಿಯಲ್ಲಿ 5 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಆರ್‌ಬಿಐ ಬಳಿ 882 ಟನ್ ಚಿನ್ನ ಮೀಸಲು ಇದೆ.
* ಚಿನ್ನದ ಸಂಗ್ರಹದಲ್ಲಿ ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಭಾರತದ ಕೇಂದ್ರ ಬ್ಯಾಂಕ್ ಆಗಿರುವ ‘ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಗ್ರ ಸ್ಥಾನದಲ್ಲಿರುವುದು ವಿಶೇಷ.
* ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು 2024ರಲ್ಲಿ ಇದುವರೆಗೆ ಒಟ್ಟು 694 ಟನ್‌ಗಳಷ್ಟು ಚಿನ್ನ ಖರೀದಿಸಿವೆ ಎಂದು WGC ಹೇಳಿದೆ. ಇದರಲ್ಲಿ ಭಾರತದ ಆರ್‌ಬಿಐ ಬರೋಬ್ಬರಿ 77 ಟನ್ ಚಿನ್ನ ಖರೀದಿಸಿದೆ.
* ಕಳೆದ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) 27ಟನ್ (27000 ಕೆಜಿ) ಚಿನ್ನ ಖರೀದಿಸಿದೆ. ನಂತರದ ಸ್ಥಾನದಲ್ಲಿ, ಟರ್ನಿ 17ಟನ್ ಚಿನ್ನ ಖರೀದಿಸಿದರೆ, ಪೋಲೆಂಡ್ 8 ಟನ್ ಚಿನ್ನವನ್ನು ಖರೀದಿಸಿದೆ. ಮತ್ತೊಂದೆಡೆ ಕಳೆದ 5 ತಿಂಗಳಿನಿಂದ ಚಿನ್ನ ಮಾರಾಟ ಮಾಡುತ್ತಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಕಜಕಿಸ್ತಾನ್ ಅಕ್ಟೋಬರ್ ನಲ್ಲಿ ಮತ್ತೆ ಚಿನ್ನ ಖರೀದಿ ಆರಂಭಿಸಿದೆ.
* ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2650 ಡಾಲರ್ ಆಗಿದೆ. ಮುಂದಿನ ವರ್ಷ ಇದು 3000 ಡಾಲರ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಅಕ್ಟೋಬರ್‌ನಲ್ಲಿ 27 ಟನ್ ಚಿನ್ನ ಖರೀದಿಸಿದ RBI, ವಿಶ್ವದಲ್ಲೇ ಅಗ್ರಸ್ಥಾನ!
Published by Jyoti Angadi
06 ಡಿಸೆಂಬರ್ 2024