* ಭಾರತೀಯ ವಾಯುಪಡೆಯನ್ನು 1932ರ ಅಕ್ಟೋಬರ್ 8ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು. ಎರಡನೇ ಮಹಾಯುದ್ಧದಲ್ಲಿ ಭಾರತೀಯ ಯೋಧರು ತೋರಿದ ವೃತ್ತಿಪರ ದಕ್ಷತೆ ಮತ್ತು ಸಾಹಸವನ್ನು ಪರಿಗಣಿಸಿ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.
* 2024ರ ಭಾರತೀಯ ವಾಯುಪಡೆ ದಿನದ ಥೀಮ್ "ಸಕ್ಷಮ, ಸಶಕ್ತ ಮತ್ತು ಆತ್ಮನಿರ್ಭರ" (ಸಮರ್ಥ, ಶಕ್ತಿಯುತ ಮತ್ತು ಸ್ವಾವಲಂಬಿ) ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ವಾಯುಪಡೆ ದಿನ ಆಚರಣೆಯಾಗುತ್ತದೆ.
* ಭಾರತೀಯ ವಾಯುಪಡೆಯನ್ನು 'ರಾಯಲ್ ಇಂಡಿಯನ್ ಏರ್ ಫೋರ್ಸ್' (ಆರ್‌ಐಎಎಫ್) ಎಂದು ಕರೆಯಲಾಯಿತು. ಭಾರತೀಯ ವಾಯುಪಡೆ ವಿಶ್ವದ ನಾಲ್ಕನೇ ಅತಿ ದೊಡ್ಡ ವಾಯುಪಡೆಯಾಗಿದೆ.
* ಭಾರತೀಯ ವಾಯುಪಡೆಯು ಈ ವರ್ಷ 92 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 8ನೇ ಅಕ್ಟೋಬರ್ 1932 ರಂದು 'ರಾಯಲ್ ಇಂಡಿಯನ್ ಏರ್ ಫೋರ್ಸ್' ಆಗಿ ಅಸ್ತಿತ್ವಕ್ಕೆ ಬಂದಿತು. ಐದು ಕಾರ್ಯಾಚರಣಾ ಕಮಾಂಡ್ಸೆಂಟರ್‌ಗಳೊಂದಿಗೆ 1,130 ಯುದ್ಧ ಮತ್ತು 1,700 ಯುದ್ಧೇತರ ವಿಮಾನಗಳನ್ನು ಹೊಂದಿದೆ.
* ಮೊದಲ ವಿಮಾನವು ಏಪ್ರಿಲ್ 1, 1933 ರಂದು ಭಾರತೀಯ ವಾಯುಪಡೆಯನ್ನು ಪ್ರವೇಶಿಸಿತು. ಆರಂಭದಲ್ಲಿ ಇದು ಕೇವಲ ಐದು ಪೈಲಟ್‌ಗಳು ಮತ್ತು ಒಬ್ಬ RAF ಅನ್ನು ಹೊಂದಿತ್ತು.
* ಈ ವರ್ಷದ ದಿನವನ್ನು ಆಚರಿಸಲು, IAF ತನ್ನ ವಾರ್ಷಿಕ ವಾಯುಪಡೆಯ ದಿನದ ಪರೇಡ್ ಅನ್ನು ಅಕ್ಟೋಬರ್ 8 ರಂದು ಪ್ರಯಾಗರಾಜ್‌ನಲ್ಲಿ ನಡೆಸಲಿದೆ.
* ಭಾರತೀಯ ವಾಯುಪಡೆಯ ಮೊದಲ ಐದು ಪೈಲಟ್‌ಗಳಾಗಿ ಹರೀಶ್ ಚಂದ್ರ ಸಿರ್ಕಾರ್, ಸುಬ್ರೋತೋ ಮುಖರ್ಜಿ, ಭೂಪೇಂದ್ರ ಸಿಂಗ್, ಆಜಾದ್ ಭಕ್ಷ ಅವನ್ ಮತ್ತು ಅಮರ್‌ಜೀತ್ ಸಿಂಗ್ ಅವರು ವಾಯುಯಾನ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.
ಮಂಗಳವಾರ, 08 ಅಕ್ಟೋಬರ್ 2024
10:46 ಪೂರ್ವಾಹ್ನ
Daily PDF
ಅಕ್ಟೋಬರ್ 08 : ಭಾರತೀಯ ವಾಯುಪಡೆಯ ದಿನ
Authored by:
Yallamma G