* ಐಸಿಸಿ ಟಿ20 ರಾಂಕಿಂಗ್‌ನಲ್ಲಿ ಭಾರತ ತಂಡವು ಆಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಸೂರ್ಯಕುಮಾರ್ ಯಾದವ್ ಅವರು 861 ಪಾಯಿಂಟ್ಸ್ ಗಳಿಂದ ಐಸಿಸಿ T20 ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
* ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಅತಿಥ್ಯದಲ್ಲಿ ಜೂನ್ 2ರಂದು ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬಿಡುಗಡೆಯಾದ ಪಟ್ಟಿಯಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ ತಂಡವು 264 ಪಾಯಿಂಟ್ಸ್ ಗಳೊಂದಿಗೆ ಮೊದಲ ಸ್ಥಾನ ಕಾಪಾಡಿಕೊಂಡಿದೆ.
* 2021ರ ಚಾಂಪಿಯನ್ ಆಸ್ಟ್ರೇಲಿಯಾ (257) ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ (254) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
* ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಎರಡು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ಏರಿದೆ. ಇತ್ತೀಚಿನ ಕೆಲ ಟೂರ್ನಿಗಳಲ್ಲಿ ತಂಡವು ಉತ್ತಮ ಪ್ರದರ್ಶನ ತೋರಿದ್ದು ಇದಕ್ಕೆ ಕಾರಣ.
* ನ್ಯೂಜಿಲೆಂಡ್ (250), ಪಾಕಿಸ್ತಾನ (244) ಮತ್ತು ದಕ್ಷಿಣ ಆಫ್ರಿಕಾ (244) ಕ್ರಮವಾಗಿ ಐದು, ಆರು ಮತ್ತು ಏಳನೇ ಸ್ಥಾನದಲ್ಲಿವೆ.
ಗುರುವಾರ, 30 ಮೇ 2024
11:18 ಪೂರ್ವಾಹ್ನ
Daily PDF
ಐಸಿಸಿ T20 ರ್ಯಾಂಕಿಂಗ್ : ಭಾರತಕ್ಕೆ ಆಗ್ರಾ ಸ್ಥಾನ
Authored by:
Yallamma G