* ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ವಿಜೇತರನ್ನು ಅ೦ತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಣೆ ಮಾಡಿದೆ. ಇದು ಡಿಸೆಂಬರ್ ತಿಂಗಳ ಪ್ರಶಸ್ತಿಯಾಗಿದ್ದು, ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮ ಭಾಜನರಾಗಿದ್ದಾರೆ.
* ಕಳೆದ ತಿಂಗಳು(ನವೆಂಬರ್ 2023) ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ದೀಪ್ತಿ 55 ಸರಾಸರಿಯಲ್ಲಿ 165 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಬೌಲಿಂಗ್‌ನಲ್ಲೂ ಮಿಂಚಿದ್ದ ದೀಪ್ತಿ 10.81 ಸರಾಸರಿಯಲ್ಲಿ 11 ವಿಕೆಟ್‌ಗಳನ್ನುಪಡೆದಿದ್ದರು.
* ಈ ಎರಡೂ ಟೆಸ್ಟ್‌ಗಳಲ್ಲಿ ಭಾರತ ಜಯಭೇರಿ ಬಾರಿಸಿತ್ತು. ನಂತರ ದೀಪ್ತಿ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು.
* ಈ ಎಲ್ಲ ಸಾಧನೆಗಳಿಂದಾಗಿ ಐಸಿಸಿ ಮಾಸಿಕ ಕ್ರಿಕೆಟರ್ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಇದಕ್ಕೂ ಮೊದಲು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 20220 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಈ ಪ್ರಶಸ್ತಿಯನ್ನು ಪಡೆದ ಭಾರತದ 2ನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮ ಪಾತ್ರರಾಗಿದ್ದಾರೆ.
* ಪುರುಷರ ವಿಭಾಗದಲ್ಲಿ ಕಮಿನ್ಸ್‌ಗೆ ಪ್ರಶಸ್ತಿ: ಆಸಿಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಪುರುಷರ ವಿಭಾಗದಲ್ಲಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ತೈಜುಲ್ ಇಸ್ಲಾಂ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಹಿಂದಿಕ್ಕಿ ಕಮಿನ್ಸ್ ಈ ಪ್ರಶಸ್ತಿ ಪಡೆದಿದ್ದಾರೆ. ತವರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಕಮಿನ್ಸ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಪರ್ತ್‌ನಲ್ಲಿ ಮೂರು ಮತ್ತು ಮೆಲ್ಲೋರ್ನ್‌ನಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಕಮಿನ್ಸ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿದ್ದರು.
ಶನಿವಾರ, 20 ಜನವರಿ 2024
5:05 ಅಪರಾಹ್ನ
Daily PDF
ಐಸಿಸಿ ಮಾಸಿಕ ಕ್ರಿಕೆಟರ್ ಪ್ರಶಸ್ತಿಗೆ ದೀಪ್ತಿ ಶರ್ಮ ಆಯ್ಕೆ
Authored by:
Yallamma G