* 2023 ಅಕ್ಟೋಬರ್ 5 ರಿಂದ ಭಾರತದ ಅಹಮದಾಬಾದ್ ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಸಿಸಿ ವಿಶ್ವಕಪ್‌ನ ಪಂದ್ಯಗಳನ್ನು ವೀಕ್ಷಿಸಲು ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 'ಗೋಲ್ಡನ್ ಟಿಕೆಟ್' ನೀಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಅವರೇ ಚೆನ್ನೈನಲ್ಲಿರುವ ರಜನಿಕಾಂತ್ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದಾರೆ.
* ರಜನಿ ಕಾಂತ್ ಅವರು ಈ ಮೂಲಕ ವಿ ಐ ಪಿ ನಲ್ಲಿ ಕುಳಿತು ಎಲ್ಲ ಪಂದ್ಯಗಳನ್ನ ವೀಕ್ಷಿಸುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ.
* ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ.
* ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆಯಡಿ ಭಾರತದ ಹಲವು ಸಾಧಕರಿಗೆ ಈ ಗೋಲ್ಡನ್ ಟಿಕೆಟ್ ನೀಡಿ ಪಂದ್ಯಾವಳಿಗಳ ವೀಕ್ಷಣೆಗೆ ಆಹ್ವಾನಿಸಲಾಗಿದೆ.
ಗುರುವಾರ, 21 ಸೆಪ್ಟೆಂಬರ್ 2023
10:27 ಪೂರ್ವಾಹ್ನ
Daily PDF
ಐಸಿಸಿ ಏಕದಿನ ವಿಶ್ವಕಪ್ 2023 : ರಜನಿಕಾಂತ್ ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ
Authored by:
Yallamma G