* ಐಸಿಸಿ 19 ವರ್ಷದೊಳಗಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ದೇಶ ದಕ್ಷಿಣ ಆಫ್ರಿಕಾ ತಂಡವನ್ನು ಎರಡು ವಿಕೆಟ್ ಗಳಿಂದ ಸೋಲಿಸಿ ಭಾರತ ತಂಡ ಫೈನಲ್ ಪ್ರವೇಶಿಸಿದೆ.
* ಭಾರತ ತಂಡ ನಾಯಕ ಉದಯ್ ಸಹಾರನ್ ಮತ್ತು ಸಚಿನ್ ದಾಸ್ ಅವರ ಅಮೋಘ ಆಟದಿಂದ ಫೈನಲ್ ಪ್ರವೇಶಿಸಲು ಸಾಧ್ಯವಾಯಿತು.
* 245 ರನ್‌ಗಳ ಬೆನ್ನತ್ತಿದ್ದ ಹಾಲಿ ಚಾಂಪಿಯನ್ ಭಾರತ 12 ಓವರ್‌ಗಳಾಗುವಷ್ಟರಲ್ಲಿ 32 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಗೂಡಿದ ಸಹಾರನ್ ಮತ್ತು ದಾಸ್ 171 ರನ್ ಸೇರಿಸಿ ತಂಡವನ್ನು ವಿಜಯಪಥದಲ್ಲಿ ಮುನ್ನಡೆಸಿದರು. ನಂತರ ಮೂರು ವಿಕೆಟ್‌ಗಳು ಬಿದ್ದರೂ ಒತ್ತಡವಿರಲಿಲ್ಲ. ಏಳು ಎಸೆತ ಗಳಿರುವಂತೆ ತಂಡ 8 ವಿಕೆಟ್‌ಗೆ 248 ರನ್ ಹೊಡೆಯಿತು.
* ನೇಪಾಳ ವಿರುದ್ಧ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲೂ ಸಹಾರನ್ ಮತ್ತು ದಾಸ್ ಇವರಿಬ್ಬರು ಶತಕ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದರು.
* ಫೆ. 8 (ಗುರುವಾರ) ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಫೆ.11 ರಂದು ನಿಗದಿಯಾಗಿದೆ.
ಬುಧವಾರ, 07 ಫೆಬ್ರುವರಿ 2024
10:22 ಪೂರ್ವಾಹ್ನ
Daily PDF
ಐಸಿಸಿ 19 ವರ್ಷದೊಳಗಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ : ಫೈನಲ್ ಪ್ರವೇಶಿಸಿದ ಭಾರತ ತಂಡ
Authored by:
Yallamma G