* ಭಾರತದಲ್ಲಿ ಜನರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಬ್ಯಾಂಕ್‌ಗಳ ಮೇಲೆ ಹೆಚ್ಚಿನ ಅವಲಂಬನೆ ಇಡುತ್ತಾರೆ. ಮನೆಗಳಲ್ಲಿ ನಗದು ಇಟ್ಟುಕೊಂಡರೆ ಕಳ್ಳತನ, ನಷ್ಟ ಮತ್ತು ಅಪಾಯಗಳ ಭೀತಿ ಇರುವುದರಿಂದ, ಹಣವನ್ನು ಸ್ಥಿರವಾದ ಬ್ಯಾಂಕ್‌ಗಳಲ್ಲಿ ಉಳಿಸುವುದು ಹೆಚ್ಚು ಭದ್ರ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದೇಶದ ಅತ್ಯಂತ ಸುರಕ್ಷಿತ ಮೂರು ಬ್ಯಾಂಕ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.
* ಈ ಬ್ಯಾಂಕ್‌ಗಳನ್ನು ಹಣಕಾಸಿನ ಸ್ಥಿರತೆ, ಪಾರದರ್ಶಕ ಲೆಕ್ಕಪತ್ರ, ಆಡಿಟ್, ನಷ್ಟ ನಿರ್ವಹಣೆ ಮತ್ತು ಸಾರ್ವಜನಿಕ ನಂಬಿಕೆ ಮೊದಲಾದ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.
ಆರ್‌ಬಿಐ ಹೇಳಿದಂತೆ ದೇಶದ ಮೂರು ಸುರಕ್ಷಿತ ಬ್ಯಾಂಕ್‌ಗಳು
1️⃣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) : ಇದು ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಸರಕಾರದ ಬಲವಾದ ಬೆಂಬಲವಿರುವುದರಿಂದ ಅತ್ಯಂತ ಭದ್ರ
ವ್ಯಾಪಕ ಶಾಖೆಗಳು, ಉತ್ತಮ ಲೆಕ್ಕಪತ್ರ ನಿರ್ವಹಣೆ, ಎಫ್‌ಡಿ, ಆರ್‌ಡಿ, ಉಳಿತಾಯ ಎಲ್ಲಕ್ಕೂ ಭಾರತದ ಮೊದಲ ಆಯ್ಕೆಯಾಗಿದೆ.
2️⃣ ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) : ಇದು ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್, ಉತ್ತಮ ಕ್ರೆಡಿಟ್ ರೇಟಿಂಗ್, ಪಾರದರ್ಶಕ ಹಣಕಾಸು ನಿರ್ವಹಣೆ ಮತ್ತು ಬಲವಾದ ಡಿಜಿಟಲ್ ವ್ಯವಸ್ಥೆ, ಸ್ಥಿರತೆ ಮತ್ತು ಸುರಕ್ಷಿತ ಸೇವೆಗಾಗಿ ಪ್ರಸಿದ್ಧ
3️⃣ ಐಸಿಐಸಿಐ ಬ್ಯಾಂಕ್ (ICICI Bank) : ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್, ಉತ್ತಮ ಲಾಭದಾಯಕತೆ ಮತ್ತು ಬಲವಾದ ಹಣಕಾಸು ಸ್ಥಿತಿ,
ದೇಶದಾದ್ಯಂತ ಸಾವಿರಾರು ಶಾಖೆಗಳು, ನಿರ್ವಹಣಾ ಗುಣಮಟ್ಟ ಹಾಗೂ ಆಡಿಟ್ ವ್ಯವಸ್ಥೆ ಉತ್ತಮ
* ಈ ಬ್ಯಾಂಕ್‌ಗಳನ್ನು ಏಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆಂದರೆ :
- ದೇಶವ್ಯಾಪಕ ಸೇವೆಗಳು ಮತ್ತು ಬಲವಾದ ನೆಲೆ
- ಉತ್ತಮ ಲೆಕ್ಕಪತ್ರ, ಆಡಿಟ್ ಮತ್ತು ಪಾರದರ್ಶಕ ಕಾರ್ಯವಿಧಾನ
- ನಷ್ಟ ನಿರ್ವಹಣೆ ವ್ಯವಸ್ಥೆ ಉತ್ತಮ
- ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಸಂರಕ್ಷಿಸುವ ಸಾಮರ್ಥ್ಯ
- ಆರ್‌ಬಿಐ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆ
* ಹಣವನ್ನು ಮನೆಯಲ್ಲಿಟ್ಟರೆ ಸುರಕ್ಷತೆ ಇಲ್ಲ. ಆದರೆ ಆರ್‌ಬಿಐ ಮಾನ್ಯತೆ ಪಡೆದ ಈ ಮೂರು ಬ್ಯಾಂಕ್‌ಗಳಲ್ಲಿ (SBI, HDFC, ICICI) ಹಣ ಇಡುವುದು ಉಳಿತಾಯ ಮತ್ತು ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತ. ಎಫ್‌ಡಿ, ಆರ್‌ಡಿ, ಉಳಿತಾಯ ಖಾತೆ ಎಲ್ಲಕ್ಕೂ ಈ ಬ್ಯಾಂಕ್‌ಗಳು ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.