➤ ಅಮರಾವತಿ/ಕಾಕಿನಾಡ: ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯಕ್ಕೆ ಅಡಿಪಾಯ ಬಿದ್ದಿದೆ. ಆಂಧ್ರಪ್ರದೇಶದ ಕಾಕಿನಾಡ ತೀರದಲ್ಲಿರುವ 'ಹೋಪ್ ಐಲೆಂಡ್' (Hope Island) ನಲ್ಲಿ ಭಾರತದ ಮೂರನೇ ಬಾಹ್ಯಾಕಾಶ ಉಡಾವಣಾ ಕೇಂದ್ರ (Space Port) ಸ್ಥಾಪನೆಯಾಗಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅಧಿಕೃತವಾಗಿ ಘೋಷಿಸಿದ್ದಾರೆ.
ಶ್ರೀಹರಿಕೋಟ ಮತ್ತು ಕುಲಶೇಖರಪಟ್ಟಣಂ ನಂತರ ದೇಶದ ಮೂರನೇ ಪ್ರಮುಖ ಉಡಾವಣಾ ಕೇಂದ್ರವಾಗಿ ಹೋಪ್ ಐಲೆಂಡ್ ಹೊರಹೊಮ್ಮಲಿದೆ.
➤ ಹೋಪ್ ಐಲೆಂಡ್: ಇದು ಬಂಗಾಳ ಕೊಲ್ಲಿಯ ಕಾಕಿನಾಡ ಕರಾವಳಿಯಲ್ಲಿರುವ ಅತಿ ಸಣ್ಣದಾದ, ಹಾವಿನ ಆಕಾರದ (Tadpole-shaped) ದ್ವೀಪವಾಗಿದೆ. ಇದು 18ನೇ ಶತಮಾನದಲ್ಲಿ ಗೋದಾವರಿ ನದಿಯ ಉಪನದಿಯಾದ ಕೋರಿಂಗಾ ನದಿಯು ತಂದ ಹೂಳು ಸಂಗ್ರಹದಿಂದ ನೈಸರ್ಗಿಕವಾಗಿ ನಿರ್ಮಾಣವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 600 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಉಪಗ್ರಹ ಉಡಾವಣೆ ಮಾಡುವುದರಿಂದ ಜನವಸತಿ ಪ್ರದೇಶಗಳಿಗೆ ಅಪಾಯ ಕಡಿಮೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಸುಲಭವಾಗಿ ಪಥವನ್ನು ನಿರ್ಧರಿಸಬಹುದು. ಈ ದ್ವೀಪವು ಆಲಿವ್ ರಿಡ್ಲಿ ಆಮೆಗಳ (Olive Ridley turtles) ಸಂತಾನೋತ್ಪತ್ತಿ ಕೇಂದ್ರವಾಗಿದೆ ಮತ್ತು ಸಮೀಪದಲ್ಲೇ ಕೋರಿಂಗಾ ವನ್ಯಜೀವಿ ಧಾಮವಿದೆ.
➤ ಭಾರತದ ಇತರ ಬಾಹ್ಯಾಕಾಶ ನಿಲ್ದಾಣಗಳು: ಈ ಹೊಸ ಕೇಂದ್ರದೊಂದಿಗೆ ಭಾರತವು ಮೂರು ಪ್ರಮುಖ ಉಡಾವಣಾ ಕೇಂದ್ರಗಳನ್ನು ಹೊಂದಿದಂತಾಗುತ್ತದೆ:
1. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SHAR), ಶ್ರೀಹರಿಕೋಟಾ: ಇದು ಭಾರತದ ಪ್ರಾಥಮಿಕ ಮತ್ತು ಅತಿದೊಡ್ಡ ಉಡಾವಣಾ ಕೇಂದ್ರವಾಗಿದೆ.
2. ಕುಲಶೇಖರಪಟ್ಟಣಂ (ತಮಿಳುನಾಡು): ಇದು ಸಣ್ಣ ಉಪಗ್ರಹ ಉಡಾವಣಾ ವಾಹನಗಳಿಗಾಗಿ (SSLV) ಅಭಿವೃದ್ಧಿಪಡಿಸಲಾಗುತ್ತಿರುವ ಎರಡನೇ ಕೇಂದ್ರ
3. ಹೋಪ್ ಐಲೆಂಡ್ (ಆಂಧ್ರಪ್ರದೇಶ): ಖಾಸಗಿ ಮತ್ತು ವಾಣಿಜ್ಯ ಉದ್ದೇಶದ ಉಡಾವಣೆಗಳಿಗಾಗಿ ಉದ್ದೇಶಿತ ಕೇಂದ್ರ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.