* ಟೆನಿಸ್ ಲೋಕದ ದಿಗ್ಗಜ, ದಾಖಲೆಯ 24 ಗ್ರ್ಯಾಂಡ್ ಸ್ಲಾಮ್ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ಎಟಿಪಿ ರ‍್ಯಾಂಕಿಂಗ್ ನಲ್ಲೂ ದಾಖಲೆ ಸೃಷ್ಟಿಸಿದ್ದಾರೆ. ವಿಶ್ವದ ನಂ.1 ಟೆನಿಸ್ಸಿಗನಾಗಿ 419 ವಾರಗಳನ್ನು ಪೂರೈಸಿರುವ ಅವರು, ವಿಶ್ವದ ಅತಿ ಹಿರಿಯ ಆಟಗಾರ [ಅತ್ಯಂತ ಹಳೆಯ ವಿಶ್ವ ನಂ.1] ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* 36 ವರ್ಷ 321 ದಿನದ ನೊವಾಕ್ ಎಟಿಪಿ ರ್ಯಾಂಕಿಂಗ್ ನಲ್ಲಿ ವಿಶ್ವ ನಂಬರ್ 01 ಸ್ಥಾನದಲ್ಲಿದ್ದಾರೆ. ಟೆನಿಸ್ ಲೋಕದಲ್ಲಿ ಅಚ್ಚಳಿಯದ ಸಾಧನೆ ತೋರಿರುವ ಆಟಗಾರ, ಸ್ವಿಸ್ ನ ರೋಜರ್ ಫೆಡರರ್ ದಾಖಲೆಯನ್ನು ಮುರಿದಿದ್ದಾರೆ.
* ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಜೊಕೊವಿಕ್ 2011 ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ವಿಶ್ವ ನಂ.1 ಆಗಿ ಹೊರಹೊಮ್ಮಿದ್ದರು. 'ಬಿಗ್ 3' ಸ್ಪರ್ಧಿಗಳ ಪೈಕಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರು 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಿಗಳಾಗಿದ್ದರು.
36ನೇ ವಯಸ್ಸಿನಲ್ಲಿ ವಿಶ್ವ ನಂಬರ್ 01: 'ಅತಿ ಹಿರಿಯ ಟೆನಿಸಿಗ' ದಾಖಲೆ ಬರೆದ ನೊವಾಕ್ ಜೊಕೊವಿಕ್
Published by Yallamma G
03 ಏಪ್ರಿಲ್ 2024