* ಲಾರ್ಡ್ಸ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ಇದು ದಕ್ಷಿಣ ಆಫ್ರಿಕಾಗೆ 27 ವರ್ಷಗಳ ನಂತರದ ಮೊದಲ ಐಸಿಸಿ ಪ್ರಶಸ್ತಿಯಾಗಿದೆ.
* ಫೈನಲ್ ಪಂದ್ಯದಲ್ಲಿ ಎಡನ್ ಮರ್ಕರಂ (136) ಮತ್ತು ನಾಯಕ ತೆಂಬಾ ಬವುಮಾ (66) ಅವರ ಶ್ರೇಷ್ಠ ಆಟದ ಬಲದಿಂದ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿದರು.
* ಮೂರನೇ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 213/2 ರನ್ ಗಳಿಸಿ ಸುಸ್ಥಿತಿಯಲ್ಲಿ ಇತ್ತು. ನಾಲ್ಕನೇ ದಿನದಂದು ಗೆಲುವಿಗೆ 69 ರನ್ ಅಗತ್ಯವಿದ್ದರೂ ಆಸ್ಟ್ರೇಲಿಯಾ ಬೌಲರ್‌ಗಳ ತೀವ್ರ ದಾಳಿಯ ನಡುವೆ ಮರ್ಕರಂ ಆಕ್ರಮಣಕಾರಿ ನಿಲುವನ್ನು ಹಿಡಿದಿದ್ದರು.
* ಗೆಲುವಿಗೆ ಕೇವಲ 6 ರನ್ ಬಾಕಿಯಿರುವಾಗ ಅವರು ಔಟಾದರೂ ಬೆಡಿಂಗ್‌ಹ್ಯಾಮ್ ಮತ್ತು ಕೈಲ್ ವೆರೆಯೇನ್ ತಂಡವನ್ನು ಗೆಲುವಿನ ದಡ ಸೇರಿಸಿದರು.
* ಲಾರ್ಡ್ಸ್‌ನಲ್ಲಿ ಈದು ನಡೆದ ಎರಡನೇ ದೊಡ್ಡ ಚೇಸಿಂಗ್ ಆಗಿದ್ದು, 141 ವರ್ಷಗಳ ಬಳಿಕ ಈ ಸಾಧನೆ ಸಾಧ್ಯವಾಯಿತು. ಇದುವರೆಗಿನ ಮೂರು ಟೆಸ್ಟ್ ಚಾಂಪಿಯನ್‌ಷಿಪ್‌ಗಳಲ್ಲಿ ನ್ಯೂಜಿಲೆಂಡ್ (2019), ಆಸ್ಟ್ರೇಲಿಯಾ (2021) ನಂತರ ಈಗ ದಕ್ಷಿಣ ಆಫ್ರಿಕಾ ಮೂರನೇ ಚಾಂಪಿಯನ್ ಆಗಿದೆ.
27 ವರ್ಷಗಳ ಬಳಿಕ ಐಸಿಸಿ ಟೆಸ್ಟ್ ಕಿರೀಟ ಗೆದ್ದ ದಕ್ಷಿಣ ಆಫ್ರಿಕಾ
Published by Jyoti Angadi
14 ಜೂನ್ 2025