* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ (BAS) ಎಂದು ಕರೆಯಲ್ಪಡುವ ಭಾರತದ ಬಾಹ್ಯಾಕಾಶ ನಿಲ್ದಾಣವನ್ನು ಹಂತಹಂತವಾಗಿ ಸ್ಥಾಪಿಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು 2024 ಫೆಬ್ರವರಿ 7 ರಂದು ತಿಳಿಸಿದ್ದಾರೆ.
* ಇಸ್ರೋ ಪ್ರಸ್ತುತ ಬಾಹ್ಯಾಕಾಶ ನಿಲ್ದಾಣದ ಸಂರಚನೆಯ ಬಗ್ಗೆ ಕೆಲಸ ಮಾಡುತ್ತಿದೆ. ಹಾಗೂ ಬಿಎಎಸ್ ಪ್ರಸ್ತುತ ಪರಿಕಲ್ಪನೆಯ ಹಂತದಲ್ಲಿದೆ.
* ಭಾರತದ ಬಾಹ್ಯಾಕಾಶ ನಿಲ್ದಾಣದ ಕಾರ್ಯಸಾಧ್ಯತಾ ಅಧ್ಯಯನಗಳು ಪೂರ್ಣಗೊಂಡ ನಂತರ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಇದನ್ನ ಅನುಮೋದಿಸಿದ ನಂತರ, ಭಾರತದ ಬಾಹ್ಯಾಕಾಶ ನಿಲ್ದಾಣವನ್ನ ಸ್ಥಾಪಿಸಲು ಹಣವನ್ನ ಹಂಚಿಕೆ ಮಾಡಲಾಗುತ್ತದೆ.
2035ರ ವೇಳೆಗೆ ಹಂತಹಂತವಾಗಿ 'ಭಾರತೀಯ ಅಂತರಿಕ್ಷ ಕೇಂದ್ರ' ಸ್ಥಾಪನೆ
Published by Yallamma G
09 ಫೆಬ್ರವರಿ 2024