* ದೇಶದಲ್ಲಿ 2025ರ ಅಕ್ಟೋಬರ್ 1ರಿಂದ ತಯಾರಾಗುವ ಎಲ್ಲ ಟ್ರಕ್‌ಗಳ ಚಾಲಕರ ಕ್ಯಾಬಿನ್ ಕಡ್ಡಾಯವಾಗಿ ಹವಾ ನಿಯಂತ್ರಿತ ಆಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
* ಚಾಲಕರು ಅತಿಯಾದ ತಾಪಮಾನದಲ್ಲಿ ಟ್ರಕ್‌ಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ಅವರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.
* ಟ್ರಕ್‌ಗಳಲ್ಲಿ 3.5 ಟನ್‌ನಿಂದ 12 ಟನ್‌ನಷ್ಟು ಸರಕು ಸಾಗಣೆ ಮಾಡುವ ವಾಹನಗಳು (ಎನ್2) ಹಾಗೂ 12 ಟನ್ ಗೂ ಹೆಚ್ಚು ಸರಕು ಸಾಗಣೆ ಮಾಡುವ ವಾಹನಗಳಿಗೆ (ಎನ್3) ಈ ನಿಯಮ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
* ಎಸಿ ಕ್ಯಾಬಿನ್‌ಗಳು ಉತ್ತಮ ಚಾಲನಾ ಅನುಭವವನ್ನು ನೀಡುವುದಷ್ಟೇ ಅಲ್ಲದೇ ಚಾಲಕರ ಆರೋಗ್ಯ ಸುಧಾರಿಸುವುದಕ್ಕೂ ಸಹಾಯ ಮಾಡಲಿದೆ. ಅಲ್ಲದೇ ಇದು ಹೆದ್ದಾರಿಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಸಹಾಯಮಾಡಲಿದೆ ಎಂದು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2025ರಿಂದ ಟ್ರಕ್‌ಗಳಲ್ಲಿ ಎ.ಸಿ ಕ್ಯಾಬಿನ್ ಕಡ್ಡಾಯ
Published by Bhagya R K
12 ಡಿಸೆಂಬರ್ 2023