* 2024ರಲ್ಲಿ 53 ದೇಶಗಳ 295.3 ಮಿಲಿಯನ್ ಜನರು ತೀವ್ರ ಹಸಿವನ್ನು ಅನುಭವಿಸಿದ್ದಾರೆ. 2023ಕ್ಕೆ ಹೋಲಿಸಿದರೆ 13.7 ಮಿಲಿಯನ್ ಜನರ ಹೆಚ್ಚಳವಾಗಿದೆ. ನೈಜೀರಿಯಾ, ಸುಡಾನ್ ಮತ್ತು ಕಾಂಗೋ ದೇಶಗಳು ಮಾತ್ರವೇ ಶೇ.28ರಷ್ಟು ಜನರನ್ನು ಪ್ರತಿನಿಧಿಸುತ್ತವೆ.
* ಅಫ್ಘಾನಿಸ್ತಾನ, ಇಥಿಯೋಪಿಯಾ, ನೈಜೀರಿಯಾ, ಕಾಂಗೋ, ಸಿರಿಯನ್ ಅರಬ್ ಗಣರಾಜ್ಯ, ಯೆಮೆನ್ ಮುಂತಾದ ರಾಷ್ಟ್ರಗಳು 2016ರಿಂದಲೇ ಈ ಪಟ್ಟಿಯಲ್ಲಿ ಇವೆ.
* ಸಂಘರ್ಷ, ಹವಾಮಾನ ವೈಪರೀತ್ಯ ಮತ್ತು ಆರ್ಥಿಕ ಆಘಾತಗಳಿಂದ ಮಹಿಳೆಯರು ಮತ್ತು ಮಕ್ಕಳು ಗಂಭೀರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ತೀವ್ರ ಆಹಾರ ಅಭದ್ರತೆ ಸತತ ಆರನೇ ವರ್ಷವೂ ಹೆಚ್ಚಾಗಿದೆ.
* ಯುದ್ಧಗಳಿಂದಾಗಿ ಗಾಜಾ ಮತ್ತು ದಕ್ಷಿಣ ಸುಡಾನ್ ಸೇರಿದಂತೆ 140 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಆಘಾತಗಳು 15 ದೇಶಗಳಲ್ಲಿ 59.4 ಮಿಲಿಯನ್ ಜನರನ್ನು ಬಾಧಿಸಿವೆ.
* ಬರ, ಪ್ರವಾಹ, ಭೂಕುಸಿತ, ತಾಪಮಾನ ಏರಿಕೆಯಿಂದಾಗಿ 96 ಮಿಲಿಯನ್ ಜನರ ಜೀವನದ ಮೇಲೆ ಪರಿಣಾಮ ಬಿದ್ದಿದೆ. ಈ ಅಂಶಗಳು ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯನ್ನು ಹೆಚ್ಚಿಸುತ್ತಿವೆ.
* ತೀವ್ರ ಹಸಿವಿನ ತಾಪ್ 10 ದೇಶಗಳು:
ನೈಜೀರಿಯಾ (31.8 ಮಿ), ಸುಡಾನ್ (25.6 ಮಿ), ಬಾಂಗ್ಲಾದೇಶ (23.6 ಮಿ), ಇಥಿಯೋಪಿಯಾ (22 ಮಿ), ಯೆಮನ್ (16.7 ಮಿ), ಅಫ್ಘಾನಿಸ್ತಾನ (15.8 ಮಿ), ಮ್ಯಾನ್ಮಾರ್ (14.4 ಮಿ), ಪಾಕಿಸ್ತಾನ (11.8 ಮಿ), ಸಿರಿಯಾ (9.2 ಮಿ).
* ಭಾರತ ತೀವ್ರ ಹಸಿವಿನ ಸೂಚಿಯಲ್ಲಿ 105ನೇ ಸ್ಥಾನದಲ್ಲಿದೆ. ಶೇ.13.7 ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಮತ್ತು ತಾಯಂದಿರ ಆರೈಕೆಗೆ ಹೆಚ್ಚಿನ ಗಮನ ಅಗತ್ಯವಿದೆ ಎಂದು ವರದಿ ಸೂಚಿಸುತ್ತದೆ.
2025ರ ಜಾಗತಿಕ ಆಹಾರ ಬಿಕ್ಕಟ್ಟು ವರದಿ
Published by Jyoti Angadi
04 ಆಗಸ್ಟ್ 2025