* ಬಸವ ಪರಿಷತ್ ವತಿಯಿಂದ ನೀಡುವ 2025ರ ‘ಬಸವ ಪುರಸ್ಕಾರ’ಕ್ಕೆ ಐಎಸ್ಆರ್‌ಒ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.
* ಪರಿಸರ ಕ್ಷೇತ್ರದಿಂದ ಅಲ್ಮಿತ್ರಾ ಪಟೇಲ್, ನ್ಯಾಯಾಂಗ ಕ್ಷೇತ್ರದಿಂದ ರವಿವರ್ಮ ಕುಮಾರ್, ಶಿಕ್ಷಣ ಮತ್ತು ಸಹಕಾರ ಕ್ಷೇತ್ರದಿಂದ ಎಸ್.ಆರ್. ಪಾಟೀಲ, ಮಹಿಳಾ ಸಬಲೀಕರಣದಲ್ಲಿ ಎಂ.ಎನ್. ರಾಜೇಂದ್ರ ಕುಮಾರ್, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಿಂದ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.
* ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಮಾನಂದಿ ರಮೇಶ್, ಬಸವರಾಜ ಎಸ್. ದೇಶಮುಖ, ವಿ.ಎಸ್.ವಿ. ಪ್ರಸಾದ್, ಎಸ್.ಪಿ. ದಯಾನಂದ್, ಬಸವರಾಜ ಧನ್ನೂರ, ಶಾಮನೂರು ಎಸ್. ಗಣೇಶ್, ಡಾ. ನಾಗರಾಜಯ್ಯ ಎನ್., ರವಿಕುಮಾರಸ್ವಾಮಿ ಹಿರೇಮಠ ಹಾಗೂ ಬಸವರಾಜ ಯಲಿಗಾರ ಪುರಸ್ಕೃತರಾಗಿದ್ದಾರೆ.
* ಅಗಸ್ಟ್ 9ರಂದು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
2025ರ ಬಸವ ಪುರಸ್ಕಾರಕ್ಕೆ ಎಎಸ್ ಕಿರಣ್ ಕುಮಾರ್ ಸೇರಿದಂತೆ 15 ಜನರ ಆಯ್ಕೆ
Published by Jyoti Angadi
07 ಆಗಸ್ಟ್ 2025