* ಬಹ್ರೇನ್‌ನಲ್ಲಿ ನಡೆದ 2025 ರ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಯುವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯವನ್ನು ಪುನರುಚ್ಚರಿಸಿತು.
* ಭಾರತೀಯ ಬಾಲಕಿಯರ ತಂಡವು ಫೈನಲ್‌ನಲ್ಲಿ ಇರಾನ್ ತಂಡವನ್ನು 75–21 ಅಂಕಗಳಿಂದ ಸೋಲಿಸಿ, ಚಿನ್ನ ಗೆದ್ದುಕೊಂಡಿತು ಮಾತ್ರವಲ್ಲದೆ, 2013 ರ ನಂತರದ ಏಷ್ಯನ್ ಯೂತ್ ಗೇಮ್ಸ್ ಕಬಡ್ಡಿ ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವಿನ ಅಂತರವನ್ನು ದಾಖಲಿಸಿತು.
* ಅಸಾಧಾರಣ ರೈಡರ್ ನೇಹಾ ಪಟೇಲ್ 28 ಅಂಕಗಳನ್ನು ಗಳಿಸಿ, ನಿರಂತರ ಆಕ್ರಮಣವನ್ನು ಮುನ್ನಡೆಸಿದರು.
* ಐದು ಪಂದ್ಯಗಳಲ್ಲಿ, ತಂಡವು 312 ಅಂಕಗಳನ್ನು ಗಳಿಸಿ ಕೇವಲ 89 ಅಂಕಗಳನ್ನು ಬಿಟ್ಟುಕೊಟ್ಟಿತು, ಪಂದ್ಯಾವಳಿಯ ಉದ್ದಕ್ಕೂ ಸಂಪೂರ್ಣ ನಿಯಂತ್ರಣವನ್ನು ಪ್ರದರ್ಶಿಸಿತು.
* ಈ ಪ್ರಬಲ ಪ್ರದರ್ಶನವು ಭಾರತದ ಯುವ ಬಾಲಕಿಯರ ಕಬಡ್ಡಿ ತಂಡದ ತಾಂತ್ರಿಕ ಪರಿಪಕ್ವತೆ ಮತ್ತು ಅಥ್ಲೆಟಿಕ್ ಶ್ರೇಷ್ಠತೆಯನ್ನು ಎತ್ತಿ ತೋರಿಸಿತು.
* 2025 ರ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚು ಗೆದ್ದು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಚೀನಾ ಆರು ಚಿನ್ನ, 10 ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದೆ, ನಂತರದಲ್ಲಿ ಥಾಯ್ಲೆಂಡ್, ಉಜ್ಬೇಕಿಸ್ತಾನ ದೇಶಗಳಿವೆ.
ಗುರುವಾರ, 30 ಅಕ್ಟೋಬರ್ 2025
4:14 ಅಪರಾಹ್ನ
Daily PDF
2025 ರ ಏಷ್ಯನ್ ಯೂತ್ ಗೇಮ್ಸ್ ನಲ್ಲಿ ಕಬಡ್ಡಿಯಲ್ಲಿ ಭಾರತಕ್ಕೆ ಡಬಲ್ ಚಿನ್ನ
Authored by:
Yallamma G