* 2024ರ ಸಂತೋಷದಾಯಕ ದೇಶಗಳ ವರದಿ ಪ್ರಕಟಗೊಂಡಿದೆ, ಫಿನ್ ಲ್ಯಾಂಡ್ ದೇಶವನ್ನು 7804 ಅಂಕಗಳೊಂದಿಗೆ ಆರನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂದು ಪರಿಗಣಿಸಲಾಗಿದೆ.
* ಈ ಸಂತೋಷದಾಯಕ ದೇಶಗಳ ವರದಿಯಪ್ರಕಾರ 146 ದೇಶಗಳಲ್ಲಿ ಭಾರತವು 126ನೇ ಸ್ಥಾನದಲ್ಲಿದೆ. 4036 ಅಂಕಗಳೊಂದಿಗೆ ಜಾಗತಿಕವಾಗಿ ಅತ್ಯಂತ ಕಡಿಮೆ ಸಂತೋಷದಾಯಕ ರಾಷ್ಟ್ರಗಳಲ್ಲಿ ಒಂದಾಗಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಚೀನಾ ರಾಷ್ಟ್ರಗಳು ಸಂತೋಷದ ವಿಚಾರದಲ್ಲಿ ಭಾರತವನ್ನು ಮೀರಿಸಿವೆ.
* ಅನೇಕ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ಫಿನ್ ಲ್ಯಾಂಡ್ ದೇಶವು, ಸಮಾನತೆ, ಸ್ವಾತಂತ್ರ್ಯ, ಕಡಿಮೆ ಭ್ರಷ್ಟಾಚಾರ, ಸಹಾಯ, ಉತ್ತಮ ಆರೋಗ್ಯ, ಅಗ್ಗದ ಸಾರ್ವಜನಿಕ ಸಾರಿಗೆ, ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಜೀವನ ಶೈಲಿಗಳಿಗೆ ಹೆಸರುವಾಸಿಯಾಗಿದೆ.
* ಫಿನ್‌ಲ್ಯಾಂಡ್‌ನ ವಿಶೇಷತೆ ಏನೆಂದರೆ ಇಲ್ಲಿ ವಿದ್ಯಾರ್ಥಿಗಳು ಪ್ರತಿದಿನ 3 ಜನರಿಗೆ ಸಹಾಯ ಮಾಡುತ್ತಾರೆ. ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ ಗೋಚರಿಸುವ ಇದು, ಅಪಾರ ಸಂತೋಷವನ್ನು ನೀಡುವ ಕೆಲಸವಾಗಿದೆ. ಪ್ರತೀ ದಿನ ನಡೆಯುವ ಈ ಚಟುವಟಿಕೆ, ಮಕ್ಕಳ ಮನಸ್ಸನ್ನು ದಿನವಿಡೀ ಪ್ರಫುಲ್ಲತೆಯಿಂದಿರಿಸಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
* ಸಂತೋಷದಾಯಕ ದೇಶಗಳ ವರದಿಯನ್ನು 2012 ಏಪ್ರಿಲ್ 1ರಂದು ಮೊದಲ ಬಾರಿಗೆ ಬಿಡುಗಡೆಯಾಯಿತು. ಮೊದಲ ವರದಿಯು ಪ್ರಪಂಚದ ಸಂತೋಷದ ಸ್ಥಿತಿ, ಸಂತೋಷ ಮತ್ತು ದುಃಖದ ಕಾರಣಗಳು, ಕೇಸ್ ಸ್ಟಡೀಸ್ ಫಲಿತಾಂಶದ ಮೇಲೆ ಆಧರಿಸಿತ್ತು.
* ವಿಶ್ವದ ಟಾಪ್ 10 ಸಂತೋಷದಾಯಕ ದೇಶಗಳು :
1ನೇ ಸ್ಥಾನ ಫಿನ್ ಲ್ಯಾಂಡ್ - 7804
2ನೇ ಸ್ಥಾನ ಡೆನ್ಮಾರ್ಕ್ - 7586
3ನೇ ಸ್ಥಾನ ಐಸ್ ಲ್ಯಾಂಡ್ - 7534
4ನೇ ಸ್ಥಾನ ಇಸ್ರೇಲ್ - 7473
5ನೇ ಸ್ಥಾನ ನೆದರ್ ಲ್ಯಾಂಡ್ - 7403
6ನೇ ಸ್ಥಾನ ಸ್ವೀಡನ್ - 7395
7ನೇ ಸ್ಥಾನ ನಾರ್ವೆ -7315
8ನೇ ಸ್ಥಾನ ಸ್ವಿಟ್ಜರ್ ಲ್ಯಾಂಡ್ - 7240
9ನೇ ಸ್ಥಾನ ಲಕ್ಸೆಂಬರ್ಗ್ - 7228
10ನೇ ಸ್ಥಾನ ನ್ಯೂಜಿಲೆಂಡ್ - 7128
ಸೋಮವಾರ, 18 ಮಾರ್ಚ್ 2024
11:10 ಪೂರ್ವಾಹ್ನ
Daily PDF
2024ರ ಸಂತೋಷದಾಯಕ ದೇಶಗಳ ವರದಿ ಪ್ರಕಟ : ಫಿನ್ ಲ್ಯಾಂಡ್ ಗೆ ಅಗ್ರಸ್ಥಾನ
Authored by:
Yallamma G