* ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024 ವರ್ಷದ ಪುರುಷರ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸ್ಥಾನ ಪಡೆದಿದ್ದಾರೆ.
* ತಂಡದ ಹನ್ನೊಂದು ಆಟಗಾರಲ್ಲಿ ಇಂಗ್ಲೆಂಡ್‌ನ ನಾಲ್ವರು, ಭಾರತದ ಮೂವರು, ನ್ಯೂಜಿಲೆಂಡ್‌ನ ಇಬ್ಬರು, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದಿಂದ ತಲಾ ಒಬ್ಬರು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಏಕೈಕ ಆಟಗಾರ ಪ್ಯಾಟ್ ಕಮಿನ್ಸ್ ತಂಡಕ್ಕೆ ನಾಯಕರಾಗಿದ್ದಾರೆ.
* 2024ರಲ್ಲಿ 31 ವರ್ಷದ ಬೂಮ್ರಾ 14.92ರ ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದು ಅಮೋಘ ಪ್ರದರ್ಶನ ನೀಡಿ, ವರ್ಷದ ಅಗ್ರ ವಿಕೆಟ್ ವಿಕೆಟ್ ಪಡೆಯುವ ಆಟಗಾರರ ಪಟ್ಟಿಯಲ್ಲಿ ಇದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗಾವಸ್ಕರ್ ಸರಣಿಯಲ್ಲಿ 32 ವಿಕೆಟ್ ಪಡೆದು ಸರಣಿಯ ಆಟಗಾರ ಗೌರವವನ್ನು
ಗಳಿಸಿದ್ದಾರೆ.
* 36 ವರ್ಷ ವಯಸ್ಸಿನ ಜಡೇಜ ಅವರು 2024 ರ ವರ್ಷದಲ್ಲಿ 29.27ರ ಸರಾಸರಿಯಲ್ಲಿ 527 ರನ್ ಗಳಿಸಿಸುವ ಜೊತೆಗೆ 24.29ರ ಸರಾಸರಿಯಲ್ಲಿ 48 ವಿಕೆಟ್ ಪಡೆದಿದ್ದಾರೆ.
* 23 ವರ್ಷ ವಯಸ್ಸಿನ ಜೈಸ್ವಾಲ್ 54.74ರ ಸರಾಸರಿಯಲ್ಲಿ 1,478 ರನ್ ಗಳಿಸಿ, ಇಂಗ್ಲೆಂಡ್‌ನ ಜೋ ರೂಟ್ (1,556) ಅವರ ನಂತರ ದ್ವಿತೀಯ ಸ್ಥಾನದಲ್ಲಿದ್ದಾರೆ.
* ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್(ನಾಯಕ), ಭಾರತದ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಇಂಗ್ಲೆಂಡ್‌ನ ಬೆನ್ ಡಕೆಟ್, ಜೊ ರೂಟ್, ಹ್ಯಾರಿ ಬ್ರೂಕ್, ಜೆಮ್ಮಿ ಸ್ಮಿತ್ (ವಿಕೆಟ್ ಕೀಪರ್), ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಮ್ಯಾಟ್ ಹೆನ್ರಿ, ಶ್ರೀಲಂಕಾದ ಕಮಿಂದು ಮೆಂಡೀಸ್ ಟೆಸ್ಟ್ ತಂಡದಲ್ಲಿದ್ದಾರೆ.
ಶನಿವಾರ, 25 ಜನವರಿ 2025
12:55 ಅಪರಾಹ್ನ
Daily PDF
2024ರ ಐಸಿಸಿ ಟೆಸ್ಟ್ ತಂಡ: ಜಸ್‌ಪ್ರೀತ್ ಬುಮ್ರಾ ಸೇರಿ 3 ಭಾರತೀಯರು ಸ್ಥಾನ
Authored by:
Jyoti Angadi