* ಹುರೂನ್‌ ಇಂಡಿಯಾ ಸಂಸ್ಥೆಯು ಎಡೆಲ್‌ಗಿವ್‌ ಸಂಸ್ಥೆಯ ಜೊತೆ ಸೇರಿ ಬಿಡುಗಡೆ ಮಾಡಿರುವ 2023ರ ದೇಶದ 119 ದಾನಿಗಳ ಪಟ್ಟಿಯಲ್ಲಿ ಶಿವ ನಾಡಾರ್ ಮೊದಲನೇ ಸ್ಥಾನದಲ್ಲಿದ್ದಾರೆ.
* ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಸಂಸ್ಥಾ‍ಪಕ ಶಿವ ನಾಡಾರ್ ಅವರು ಸತತ ಎರಡನೇ ಬಾರಿಯೂ ದೇಶದ ಮಹಾದಾನಿ ಆಗಿದ್ದಾರೆ. ಶಿವ ನಾಡರ್ ಅವರು ಒಂದು ವರ್ಷದ ಅವಧಿಯಲ್ಲಿ ಒಟ್ಟು ₹2,042 ಕೋಟಿ ದಾನ ಮಾಡಿದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 
* 2022ರ ಏಪ್ರಿಲ್ 1 ರಿಂದ 2023ರ ಮಾರ್ಚ್ 31ರ ಅವಧಿಯಲ್ಲಿ ದೇಶದ 119 ಮಹಾದಾನಿಗಳು ಒಟ್ಟು 78,445 ಕೋಟಿ ದಾನ ನೀಡಿದ್ದಾರೆ. ಕಳೆದ ವರ್ಷ ನೀಡಿದ್ದ ದಾನದ ಮೊತ್ತಕ್ಕೆ ಹೋಲಿಸಿದರೆ ಶೇ 59ರಷ್ಟು ಏರಿಕೆ ಕಂಡುಬಂದಿದೆ. ಶಿವ ನಾಡಾರ್ ಅವರು ವಾರ್ಷಿಕ 2,042 ಕೋಟಿ ದಾನ ಮಾಡುವ ಮೂಲಕ ಮೊದ್ಲನೇ ಸ್ಥಾನದಲ್ಲಿದ್ದಾರೆ. ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ವಾರ್ಷಿಕ 11,774 ಕೋಟಿ ದಾನ ಮಾಡುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
* ಹುರೊನ್ ಇಂಡಿಯ ಸಂಸ್ಥೆಯ ಮುಖ್ಯ ಸಂಶೋಧಕ, ವ್ಯವಸ್ಥಾಪಕ ನಿರ್ದೇಶಕ ಅಸನ್ ರಹಮಾನ್ ಜುನೈದ ಈ ಮಾಹಿತಿಯನ್ನು ನೀಡಿದ್ದಾರೆ .
* - ಹೆಚ್ಚಿನ ಸಂಖ್ಯೆಯ ದಾನಿಗಳನ್ನು ಹೊಂದಿರುವ ನಗರಗಳು :     
ಮೊದಲನೇ ಸ್ಥಾನದಲ್ಲಿ ಮುಂಬೈ (39)
ಎರಡನೇ ಸ್ಥಾನದಲ್ಲಿ ದೆಹಲಿ (19)
ಮೂರನೇ ಸ್ಥಾನದಲ್ಲಿ ಬೆಂಗಳೂರು (19)
* ಪ್ರಮುಖ 10 ದಾನಿಗಳ ವಿವರ (ಕೋಟಿಗಳಲ್ಲಿ)
ಶಿವ ನಾಡಾರ್‌ಮತ್ತು ಕುಟುಂಬ : 2,042
ಅಜೀಂ ಪ್ರೇಮ್‌ಜಿ ಮತ್ತು ಕುಟುಂಬ : 1,774
ಮುಕೇಶ್‌ ಅಂಬಾನಿ ಮತ್ತು ಕುಟುಂಬ : 376
ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬ : 287
ಗೌತಮ್ ಅದಾನಿ ಮತ್ತು ಕುಟುಂಬ : 285
ಬಜಾಜ್‌ಕುಟುಂಬ : 264
ಅನಿಲ್‌ ಅಗರ್ವಾಲ್‌ಮತ್ತು ಕುಟುಂಬ : 241
ನಂದನ್‌ನಿಲೇಕಣಿ : 189
ಸೈರಸ್‌ಎಸ್.ಪೂನಾವಾಲ ಮತ್ತು ಆದಾ‌ ಪೂನಾವಾಲ : 179
ರೋಹಿಣಿ ನಿಲೇಕಣಿ : 170