ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅರ್ಜಿ ಅಹ್ವಾನ

ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by Surekha Halli
04 ಜೂನ್ 2020 Others
Tags: Degree B.Ed
ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ವಿಷಯಗಳ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತು ಮಾಹಿತಿ ನಿಮಗಾಗಿ * ಅಕ್ಕೂರು-ಹೊಸಹಳ್ಳಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. - ಅಭ್ಯರ್ಥಿಗಳು ಅರ್ಜಿಯ ಒಂದು ಪ್ರತಿಯನ್ನು ಕಾರ್ಯದರ್ಶಿಗಳು, ಅಕ್ಕೂರು-ಹೊಸಹಳ್ಳಿ ವಿದ್ಯಾಸಂಸ್ಥೆ,ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ರವರಿಗೆ ಅರ್ಜಿ ಸಲ್ಲಿಸುವುದು. ಮತ್ತು ಇನ್ನೊಂದು ಪ್ರತಿಯನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಜಿಲ್ಲೆ ರವರಿಗೆ ಅರ್ಜಿ ಸಲ್ಲಿಸುವುದು. - ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗಳು 500 /- ರೂಪಾಯಿಗಳನ್ನು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 /- ರೂಪಾಯಿಗಳನ್ನು ಬ್ಯಾಂಕ ಹುಂಡಿಯನ್ನು ಕಾರ್ಯದರ್ಶಿಗಳು, ಅಕ್ಕೂರು-ಹೊಸಹಳ್ಳಿ ವಿದ್ಯಾಸಂಸ್ಥೆ,ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಅವರ ಹೆಸರಿನಲ್ಲಿ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020 - ಹುದ್ದೆಗಳ ವಿವರ : - ಜೀವಶಾಸ್ತ್ರ - ಸಮಾಜವಿಜ್ಞಾನ * ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿಯಲ್ಲಿ ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. - ಹುದ್ದೆಗಳ ವಿವರ - ಸಹ ಶಿಕ್ಷಕರು ಅಭ್ಯರ್ಥಿಗಳು ತಮ್ಮ ಎಲ್ಲ ಪ್ರಮಾಣ ಪಾತ್ರಗಳ ನಕಲುಗಳೊಂದಿಗೆ ಅಧ್ಯಕ್ಷರು / ಗೌರವ ಕಾರ್ಯದರ್ಶಿಗಳು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿ ಇವರ ಹೆಸರಿನಲ್ಲಿ 1000 /- ರೂಪಾಯಿಗಳನ್ನು ಡಿಡಿಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು / ಗೌರವ ಕಾರ್ಯದರ್ಶಿಗಳು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಮಿನಿ ವಿಧಾನಸೌಧದ ಎದುರಿಗೆ, ಪೋಸ್ಟ - ಇಂಡಿ,ಜಿ : ವಿಜಯಪುರ ಇವರಿಗೆ ತಲಪುವಂತೆ ಹಾಗೂ ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಕಳುಹಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-06-2020 * ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ, ಕಲಬುರಗಿಯಲ್ಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. - ಅರ್ಜಿಯನ್ನು ಪ್ರದಾನ ಕಾರ್ಯದರ್ಶಿಗಳು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸಂಸ್ಥೆ, ಕಲಬುರುಗಿ ಇವರ ಹೆಸರಿನಲ್ಲಿ ಎಸ್.ಸಿ, ಎಸ್.ಟಿ. ಅಭ್ಯರ್ಥಿಗಳು ರೂ 500 /- ಗಳ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಕಲಬುರುಗಿ ಇವರಿಗೆ ಸಲ್ಲಿಸಬೇಕು. - ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 23-06-2020 ರ ಒಳಗಾಗಿ ಮಾನ್ಯ ಪ್ರದಾನ ಕಾರ್ಯದರ್ಶಿಗಳು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ, ಡಾ.ಅಂಬೇಡ್ಕರ ಸಭಾಗೃಹ, ಪೊಲೀಸ್ ಮೈದಾನ ರಸ್ತೆ ಕಲಬುರುಗಿ ವಿಳಾಸಕ್ಕೆ ಸಲ್ಲಿಸಬೇಕು. - ಈ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
Job Overview
Start Date
4 ಜೂನ್ 2020
Employment Type
FULL_TIME
Organization
KPSC Vaani (Website)
Location
KA,
To View Official Press Notification
Related Tags: Degree B.Ed
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.