Loading..!

ರೈಲ್ವೇ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 6180 ಹುದ್ದೆಗಳ ಭರ್ಜರಿ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

Tags: Degree
Published by: Bhagya R K
|
ರೈಲ್ವೇ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 6180 ಹುದ್ದೆಗಳ ಭರ್ಜರಿ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ಭಾರತೀಯ ರೈಲ್ವೆಯಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ! ರೈಲ್ವೆ ನೇಮಕಾತಿ ಮಂಡಳಿ (RRB) 2025ನೇ ಸಾಲಿನ ಅಧಿಕೃತ ಅಧಿಸೂಚನೆಯಂತೆ, ದೇಶಾದ್ಯಂತ 6180 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025ರ ಜುಲೈ 28 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿವರ :
ಸಂಸ್ಥೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ (RRB)
ಒಟ್ಟು ಹುದ್ದೆಗಳ ಸಂಖ್ಯೆ : 6180
ಹುದ್ದೆಯ ಹೆಸರು : ಟೆಕ್ನಿಷಿಯನ್ (Technician)
ಉದ್ಯೋಗ ಸ್ಥಳ : ಅಖಿಲ ಭಾರತ
ಅರ್ಜಿ ವಿಧಾನ : ಆನ್‌ಲೈನ್

ಮಾಸಿಕ ವೇತನ : 
ಅಭ್ಯರ್ಥಿಗಳಿಗೆ ₹19,900 ರಿಂದ ₹29,200/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಹುದ್ದೆಗಳ ವಿವರ :
Technician Grade-I (Signal) : 180   
Technician Grade-III    :  6000     

ವಯೋಮಿತಿ :
Technician Grade-I (Signal) : 18 ರಿಂದ 33      
Technician Grade-III   :18 ರಿಂದ 30         

ವಯೋಮಿತಿಯಲ್ಲಿ ಶಿಥಿಲತೆ : ರೈಲ್ವೆ ನಿಯಮಾವಳಿಗಳ ಪ್ರಕಾರ ಲಭ್ಯವಿದೆ.

ಶೈಕ್ಷಣಿಕ ಅರ್ಹತೆ :
Technician Grade-I Signal : ಡಿಪ್ಲೊಮಾ, ಬಿ.ಎಸ್‌ಸಿ., ಬಿ.ಇ./ಬಿ.ಟೆಕ್                             
Technician Grade-III   : ಐಟಿಐ ಅಥವಾ ಹತ್ತನೇ ತರಗತಿ ಉತ್ತೀರ್ಣತೆ ಜೊತೆಗೆ ಸಂಬಂಧಿತ ತರಬೇತಿ 

ಆಯ್ಕೆ ಪ್ರಕ್ರಿಯೆ :
* ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
* ದಾಖಲೆ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ :
ಅಧಿಕೃತ ಅಧಿಸೂಚನೆಯನ್ನು ಓದಿ (ಪ್ರತ್ಯೇಕ ವರ್ಗಗಳಿಗೆ ಬೇರೆ ಶುಲ್ಕ ಇರಬಹುದು)

ಅರ್ಜಿ ಸಲ್ಲಿಸುವ ವಿಧಾನ :
1. RRB ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ.
2. ಇಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
3. ಆನ್‌ಲೈನ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ.
4. ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
6. ಅರ್ಜಿ ಸಲ್ಲಿಸಿ ಮತ್ತು ಅದನ್ನು ಮುದ್ರಿಸಿ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 28-ಜೂನ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-ಜುಲೈ-2025

ಇದು ಭಾರತ ರೈಲ್ವೆಯ ಅತಿದೊಡ್ಡ ನೇಮಕಾತಿಗಳಲ್ಲೊಂದಾಗಿದ್ದು, ಉತ್ತಮ ವೇತನದ ಜೊತೆಗೆ ಭದ್ರತಾ ಉದ್ಯೋಗವನ್ನೂ ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಸಮಯದಲ್ಲಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳಿ.

ವಿಶೇಷ ಸೂಚನೆ : ಅಧಿಕೃತ ಅಧಿಸೂಚನೆಯು RRB ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹೆಚ್ಚು ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

=> ಭಾರತೀಯ ರೈಲ್ವೆಯಲ್ಲಿ 6180 ಟೆಕ್ನಿಷಿಯನ್ ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 28/07/2025 ರಿಂದ 07/08/2025 ವರೆಗೆ ವಿಸ್ತರಿಸಲಾಗಿದೆ. 

Job Overview
End Date
7 ಆಗಸ್ಟ್ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
To Download Extended Notification
Related Tags: Degree

Comments