ಮಹಾನಗರ ಪಾಲಿಕೆ ಕಲಬುರಗಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕಲಬುರಗಿ ಜಿಲ್ಲಾ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ "ಪೌರಕಾರ್ಮಿಕರ" ಹುದ್ದೆಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು ಕ್ಷೇಮಾಭಿವದ್ದಿ /ದಿನಗೂಲಿ /ಗುತ್ತಿಗೆ /ಹೊರಗುತ್ತಿಗೆ /ಸಮಾನ ಕೆಲಸಕ್ಕೆ ಸಮಾನ ವೇತನ /ಇತರೆ ಆಧಾರದ ಮೇಲೆ ಕರ್ತವ್ಯ ನಿರತರಿಗೆ ಆದ್ಯತೆ ನೀಡಿ ಪರಿಗಣಿಸಲಾಗುವುದು. ಇಚ್ಛೆಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ದಿನಾಂಕ 07-04-2021 ರಿಂದ "ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ಜಿಲ್ಲಾಧಿಕಾರಿಗಳು ಕಲಬುರುಗಿ" ಕಚೇರಿಯಿಂದ ಅಥವಾ "ಆಯುಕ್ತರು ಮಹಾನಗರ ಪಾಲಿಕೆ, ಕಲಬುರಗಿ" ಕಚೇರಿಯಿಂದ ಪಡೆದುಕೊಳ್ಳಬೇಕು.
ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಎಲ್ಲ ಅಂಕಣಗಳನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ಸೂಕ್ತ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ "ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 11, ಮಿನಿ ವಿಧಾನಸೌಧ, ಕಲಬುರಗಿ-585102" ಈ ವಿಳಾಸಕ್ಕೆ ದಿನಾಂಕ 21-04-2021 ರ ಸಾಯಂಕಾಲ 05:00 ಗಂಟೆಯವರೆಗೆ ಸಲ್ಲಿಸಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Comments