ಇಸ್ರೋದಲ್ಲಿ ಉದ್ಯೋಗಾವಕಾಶ! VSSC ಯಿಂದ 460 ಗ್ರ್ಯಾಜುಯೇಟ್ & ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ವಾಕ್-ಇನ್ ಇಂಟರ್ವ್ಯೂ
Published by Heena Sheregar
21 ಜುಲೈ 2026
Others
ಬಿ.ಇ, ಬಿ.ಟೆಕ್ ಹಾಗೂ ವಿವಿಧ ವಿಭಾಗಗಳಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ, ನೇರ ಸಂದರ್ಶನ (Walk-in Interview) ಮತ್ತು ದಾಖಲೆ ಪರಿಶೀಲನೆಯ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಬರುವ ಜುಲೈ 25, 2026 ರಂದು ವಾಕ್-ಇನ್ ಇಂಟರ್ವ್ಯೂ ಆಯೋಜಿಸಲಾಗಿದ್ದು, ಆಸಕ್ತರು ನೇರವಾಗಿ ಭಾಗವಹಿಸಬಹುದು.
ಸಂದರ್ಶನ ನಡೆಯುವ ನಿಖರ ಸ್ಥಳ (Venue), ಶಾಖಾವಾರು (Branch-wise) ಖಾಲಿ ಹುದ್ದೆಗಳ ಸಂಖ್ಯೆ, ಮಾಸಿಕ ಸ್ಟೈಪೆಂಡ್ ವಿವರ ಹಾಗೂ ಪರಿಶೀಲನೆಗೆ ತರಬೇಕಾದ ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿಗಾಗಿ ಈಗಲೇ KPSCVAANI.COM ವೆಬ್‌ಸೈಟ್‌ಗೆ ಭೇಟಿ ನೀಡಿ.

ISRO VSSC ನೇಮಕಾತಿ 2026 – ಪ್ರಮುಖ ವಿವರಗಳು:
- ಸಂಸ್ಥೆಯ ಹೆಸರು: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC / ISRO)
- ಹುದ್ದೆಗಳ ಹೆಸರು: ಗ್ರ್ಯಾಜುಯೇಟ್ ಅಪ್ರೆಂಟಿಸ್ & ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್
- ತರಬೇತಿ ಅವಧಿ: 1 ವರ್ಷ
- ಅರ್ಜಿ ಸಲ್ಲಿಸುವ ವಿಧಾನ: ನೇರ ಹಾಜರಾತಿ (Walk-In Selection Drive)
- ಸಂದರ್ಶನ ದಿನಾಂಕ: 25 ಜುಲೈ 2026
1. ಗ್ರ್ಯಾಜುಯೇಟ್ ಅಪ್ರೆಂಟಿಸ್ (Graduate Apprentice): 273 ಒಟ್ಟು ಗ್ರ್ಯಾಜುಯೇಟ್ ಹುದ್ದೆಗಳು
{ಏರೋನಾಟಿಕಲ್ / ಏರೋಸ್ಪೇಸ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ / ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಟಲರ್ಜಿ, ಪ್ರೊಡಕ್ಷನ್ ಇಂಜಿನಿಯರಿಂಗ್, ಫೈರ್ & ಸೇಫ್ಟಿ ಇಂಜಿನಿಯರಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್ / ಕೇಟರಿಂಗ್ ಟೆಕ್ನಾಲಜಿ, ಜನರಲ್ ಸ್ಟ್ರೀಮ್ (Non-Engineering)}
2. ಟೆಕ್ನಿಷಿಯನ್ ಅಪ್ರೆಂಟಿಸ್ - ಡಿಪ್ಲೊಮಾ (Technician Apprentice): 187 ಒಟ್ಟು ಡಿಪ್ಲೊಮಾ ಹುದ್ದೆಗಳು
{ಆಟೋಮೊಬೈಲ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ / ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಇನ್ಸ್ಟ್ರುಮೆಂಟ್ ಟೆಕ್ನಾಲಜಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ , ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ }
ಶೈಕ್ಷಣಿಕ ಅರ್ಹತೆ (Eligibility Criteria):
- ಗ್ರ್ಯಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್ - B.E / B.Tech): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 65% ಅಂಕ ಅಥವಾ 6.84 CGPA ಯೊಂದಿಗೆ 3/4 ವರ್ಷಗಳ ಪದವಿ ಪೂರ್ಣಗೊಳಿಸಿರಬೇಕು.
- ಗ್ರ್ಯಾಜುಯೇಟ್ ಅಪ್ರೆಂಟಿಸ್ (ಹೋಟೆಲ್ ಮ್ಯಾನೇಜ್‌ಮೆಂಟ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಕೇಟರಿಂಗ್ ಟೆಕ್ನಾಲಜಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪ್ರಥಮ ದರ್ಜೆ ಪದವಿ ಪಡೆದಿರಬೇಕು.
- ಗ್ರ್ಯಾಜುಯೇಟ್ ಅಪ್ರೆಂಟಿಸ್ (ಜನರಲ್ ಸ್ಟ್ರೀಮ್ - Non-Engineering): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎ, ಬಿ.ಎಸ್ಸಿ, ಬಿ.ಕಾಮ್ ಮುಂತಾದ ಯಾವುದೇ ವಿಷಯದಲ್ಲಿ ಕನಿಷ್ಠ 60% ಅಂಕ ಅಥವಾ 6.32 CGPA ಯೊಂದಿಗೆ 3 ವರ್ಷಗಳ ಪದವಿ ಹೊಂದಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಇಂಜಿನಿಯರಿಂಗ್ ಡಿಪ್ಲೊಮಾ): ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ 3 ವರ್ಷಗಳ ಡಿಪ್ಲೊಮಾ ಉತ್ತೀರ್ಣರಾಗಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್): ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದಲ್ಲಿ ಕನಿಷ್ಠ 6.32 CGPA ನೊಂದಿಗೆ 3 ವರ್ಷಗಳ ಡಿಪ್ಲೊಮಾ ಪಡೆದಿರಬೇಕು.
- ಗ್ರ್ಯಾಜುಯೇಟ್ ಅಪ್ರೆಂಟಿಸ್ (Graduate Apprentice): ಪ್ರತಿ ತಿಂಗಳಿಗೆ ₹12,300/-
- ಟೆಕ್ನಿಷಿಯನ್ / ಡಿಪ್ಲೊಮಾ ಅಪ್ರೆಂಟಿಸ್ (Technician Apprentice): ಪ್ರತಿ ತಿಂಗಳಿಗೆ ₹10,900/-
ವೋಕ್-ಇನ್ ಸಂದರ್ಶನದ ದಿನಾಂಕ ಮತ್ತು ಸಮಯ (Date & Time):
- ದಿನಾಂಕ: 25 ಜುಲೈ 2026 (ಶನಿವಾರ)
- ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ
ಸ್ಥಳ (Venue): ಕಾರ್ತಿಕ್ ತಿರುನಾಳ್ ಗವರ್ನಮೆಂಟ್ ವಿ & ಜಿಎಚ್‌ಎಸ್ಎಸ್ ಫಾರ್ ಗರ್ಲ್ಸ್ (Karthika Thirunal Govt. V&GHSS for Girls)
ವಿಳಾಸ:
ಮಣಕಾಡು, ತಿರುವನಂತಪುರಂ ಜಿಲ್ಲೆ,
ಕೇರಳ - 695009 (Manacaud, Thiruvananthapuram District, Kerala)
ಹಾಜರಾಗುವಾಗ ತರಬೇಕಾದ ಅಗತ್ಯ ದಾಖಲೆಗಳು (Documents Required):
- SSLC / SSC ಅಂಕಪಟ್ಟಿ (ವಯಸ್ಸಿನ ದೃಢೀಕರಣಕ್ಕಾಗಿ).
- B.E/B.Tech/Diploma/Graduation ನ ಮೂಲ ಅಂಕಪಟ್ಟಿ ಹಾಗೂ ತಾತ್ಕಾಲಿಕ/ಅಂತಿಮ ಪ್ರಮಾಣಪತ್ರಗಳು (Original & Self-attested copies).
- ಜಾತಿ ಮತ್ತು ಆದಾಯ ಪ್ರಮಾಣಪತ್ರ (SC/ST/OBC-NCL/EWS ಅಭ್ಯರ್ಥಿಗಳಿಗೆ).
- ವಿಕಲಚೇತನರ ಪ್ರಮಾಣಪತ್ರ (ಅನ್ವಯಿಸಿದಲ್ಲಿ).
- ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಫೋಟೋ.
- ಪ್ರಮುಖ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಆರಂಭಿಸುವ ಮುನ್ನ NATS 2.0 Portal ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
Job Overview
- No. of posts
- 460
- End Date
- 25 ಜುಲೈ 2026
- Employment Type
- FULL_TIME
- Organization
- ISRO VSSC (Website)
- Location
- Manacaud, Thiruvananthapuram District, Kerala, 695009
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
