ಭಾರತೀಯ ಬಾಹ್ಯಕಾಶ ಸಂಸ್ಥೆಯಲ್ಲಿ (ಇಸ್ರೋ) ಇಲ್ಲಿ ಖಾಲಿ ಇರುವ 327 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗಳಿಂದ ಅರ್ಜಿ ಆಹ್ವಾನ

|
ಭಾರತೀಯ ಬಾಹ್ಯಕಾಶ ಸಂಸ್ಥೆಯಲ್ಲಿ (ಇಸ್ರೋ) ಇಲ್ಲಿ ಖಾಲಿ ಇರುವ 327 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗಳಿಂದ ಅರ್ಜಿ ಆಹ್ವಾನ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾರತದಲ್ಲೆಡೆ ಒಟ್ಟು 327 ವಿಜ್ಞಾನಿ / ಇಂಜಿನಿಯರ್ 'ಎಸ್‌ಸಿ' ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 4,2019 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳ ಬಗ್ಗೆ ಇನ್ನಿತರೆ ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಖಾಲಿ ಇರುವ ಹುದ್ದೆಗಳ ವಿವರ: * ವಿಜ್ಞಾನಿ/ಇಂಜಿನಿಯರ್- ಎಸ್‌ಸಿ (ಇಲೆಕ್ಟ್ರಾನಿಕ್ಸ್)-131 ಹುದ್ದೆಗಳು, * ವಿಜ್ಞಾನಿ/ಇಂಜಿನಿಯರ್ -ಎಸ್‌ಸಿ (ಮೆಕ್ಯಾನಿಕಲ್)-135 ಹುದ್ದೆಗಳು, * ವಿಜ್ಞಾನಿ/ಇಂಜಿನಿಯರ್ -ಎಸ್‌ಸಿ (ಕಂಪ್ಯೂಟರ್ ಸೈನ್ಸ್)- 58 ಹುದ್ದೆಗಳು * ವಿಜ್ಞಾನಿ/ಇಂಜಿನಿಯರ್- ಎಸ್‌ಸಿ (ಇಲೆಕ್ಟ್ರಾನಿಕ್ಸ್)-3 ಹುದ್ದೆಗಳು ಸೇರಿ ಒಟ್ಟು 327 ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತಿದೆ.
Job Overview
Start Date
20 ಅಕ್ಟೋಬರ್ 2019
End Date
4 ನವೆಂಬರ್ 2019
Employment Type
FULL_TIME
Organization
KPSC Vaani (Website)
Location
KA,
Selection Procedure:
ಅರ್ಜಿದಾರರ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ಜನವರಿ 12,2020ರಂದು ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುವುದು. ಅದರಲ್ಲಿ ಶೇ. 60 ರಷ್ಟು ಅಂಕ ಪಡೆದ ಅಭ್ಯರ್ಥಿಗಳಲ್ಲಿ ಯಾರು ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೆಯೋ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು.
Qualification:
ಇಸ್ರೋದಲ್ಲಿ ಉದ್ಯೋಗಕ್ಕೆ ಸೇರಲು ಬಿ.ಇ / ಬಿ.ಟೆಕ್ (BE / B.Tech) ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಶೇ.65 ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ / ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 100/- ರೂ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳು ಸಂಪೂರ್ಣ ಶುಲ್ಕ ವಿನಾಯಿತಿ ಹೊಂದಿರುತ್ತಾರೆ.
Age Limit:
ಕೊನೆಯ ದಿನಾಂಕ ನವೆಂಬರ್ 4,2019ರ ಅನ್ವಯ ಗರಿಷ್ಠ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.