ಭಾರತೀಯ ತೈಲ ನಿಗಮ ನಿಯಮಿತ(IOCL) ನೇಮಕಾತಿ 2025: 537 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ವೃತ್ತಿ ಜೀವನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) ನಲ್ಲಿ ಪ್ರಾರಂಭಿಸಬಹುದಾಗಿದೆ. ಇದು ಭಾರತದೆಲ್ಲೆಡೆ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಆಗಸ್ಟ್ 2025 ರ IOCL ಅಧಿಕೃತ ಅಧಿಸೂಚನೆಯ ಮೂಲಕ 537 ಈಸ್ಟರ್ನ್ ರೀಜಿಯನ್ ಪೈಪ್‌ಲೈನ್‌ಸ್, ವೆಸ್ಟರ್ನ್ ರೀಜಿಯನ್ ಪೈಪ್‌ಲೈನ್‌ಸ್, ನಾರ್ದರ್ನ್ ರೀಜಿಯನ್ ಪೈಪ್‌ಲೈನ್‌ಸ್, ಸದರ್ನ್ ರೀಜಿಯನ್ ಪೈಪ್‌ಲೈನ್‌ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 1ಆನ್‌ಲೈನ್ ಅರ್ಜಿ ಪ್ರಕ್ರಿಯೆ 2025ರ ಆಗಸ್ಟ್ 29ರಿಂದ ಪ್ರಾರಂಭವಾಗಿ, 2025 ಸೆಪ್ಟೆಂಬರ್ 18ರವರೆಗೆ ಮುಂದುವರಿಯಲಿದೆ.
ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಉದ್ಯೋಗ ಪೋಸ್ಟಿಂಗ್‌ಗಳಿವೆ . ಈ ರಾಜ್ಯಗಳ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ಕೇವಲ ನೌಕರಿ ಮಾತ್ರವಲ್ಲ, ಸ್ಥಿರ ವೇತನ, ಪಿಂಚಣಿ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯದ ಅವಕಾಶವಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಆಯ್ಕೆಯ ಪ್ರಕ್ರಿಯೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಾಗಿ!
📌ಪ್ರಮುಖ ವಿವರಗಳು :
🏛️ಸಂಸ್ಥೆ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)
👨💼ಹುದ್ದೆ ಹೆಸರು: ಶಿಷ್ಯ (Apprentices)
🧾ಒಟ್ಟು ಹುದ್ದೆಗಳು: 537
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-09-2025
ಅರ್ಜಿ ಪ್ರಾರಂಭ ದಿನಾಂಕ: 29-08-2025
📍ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (ವೆಬ್‌ಸೈಟ್: iocl.com)
📌ಪ್ರದೇಶವಾರ ಹುದ್ದೆಗಳ ಸಂಖ್ಯೆ:
- ಪೂರ್ವ ಪ್ರದೇಶ (ERPL): 156
- ಪಶ್ಚಿಮ ಪ್ರದೇಶ (WRPL): 152
- ಉತ್ತರ ಪ್ರದೇಶ (NRPL): 97
- ದಕ್ಷಿಣ ಪ್ರದೇಶ (SRPL): 47
- ದಕ್ಷಿಣ-ಪೂರ್ವ ಪ್ರದೇಶ (SERPL): 85
🎓ಹುದ್ದೆಗಳ ವಿವರ ಮತ್ತು ಅರ್ಹತೆ:
- ಟೆಕ್ನಿಷಿಯನ್ ಅಪ್ರೆಂಟೀಸ್ (ಮೆಕ್ಯಾನಿಕಲ್): ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ
- ಟೆಕ್ನಿಷಿಯನ್ ಅಪ್ರೆಂಟೀಸ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ
- ಟೆಕ್ನಿಷಿಯನ್ ಅಪ್ರೆಂಟೀಸ್ (ಟೆಲಿಕಾಂ & ಇನ್ಸ್ಟ್ರುಮೆಂಟೇಶನ್): ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಟೆಲಿಕಮ್ಯುನಿಕೇಷನ್, ರೇಡಿಯೋ ಕಮ್ಯುನಿಕೇಷನ್ ಅಥವಾ ಇನ್ಸ್ಟ್ರುಮೆಂಟೇಶನ್ ಸಂಬಂಧಿತ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
- ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್-ಹ್ಯೂಮನ್ ರಿಸೋರ್ಸ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ ಪದವಿ
- ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್): ಕಾಮರ್ಸ್‌ನಲ್ಲಿ ಸ್ನಾತಕ ಪದವಿ
- ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್): ಕನಿಷ್ಠ 12ನೇ ತರಗತಿ ಪಾಸು
- ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ (ಕೌಶಲ್ಯ ಪ್ರಮಾಣ ಪತ್ರ ಹೊಂದಿರುವವರು): ಕನಿಷ್ಠ 12ನೇ ತರಗತಿ ಪಾಸು ಮತ್ತು ಮಾನ್ಯ ಕೌಶಲ್ಯ ಪ್ರಮಾಣ ಪತ್ರ
🎂ವಯೋಮಿತಿ :
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 24 ವರ್ಷ
(ವಯೋಮಿತಿಯಲ್ಲಿ ಸಡಿಲಿಕೆ ನಿಯಮಾನುಸಾರ ಅನ್ವಯಿಸುತ್ತದೆ)
💰ಅರ್ಜಿ ಶುಲ್ಕ :
ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿಲ್ಲ.
📥ಆಯ್ಕೆ ವಿಧಾನ :
- ಮೆರಿಟ್ ಲಿಸ್ಟ್ (ಶೈಕ್ಷಣಿಕ ಅಂಕಗಳ ಆಧಾರ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
📝ಅರ್ಜಿ ಸಲ್ಲಿಸುವ ವಿಧಾನ :
- IOCL ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ
- ಅಧಿಸೂಚನೆಯನ್ನು ಓದಿ, ಅರ್ಹತೆಯನ್ನು ದೃಢಪಡಿಸಿ
- ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆ ಉಳಿಸಿಕೊಳ್ಳಿ
📅 ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ: 29-08-2025
- ಅರ್ಜಿಯ ಕೊನೆಯ ದಿನಾಂಕ: 18-09-2025
🔍ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು IOCL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- End Date
- 18 ಸೆಪ್ಟೆಂಬರ್ 2025
- Employment Type
- FULL_TIME
- Organization
- KPSC Vaani (Website)
- Location
- KA,
ಐಓಸಿಎಲ್ ಅಪ್ರೆಂಟಿಸ್ ಅರ್ಜಿ ಪ್ರಕ್ರಿಯೆ,
ಪದವಿ ಪಾಸಾದವರಿಗೆ IOCL ಉದ್ಯೋಗ ಅವಕಾಶ,
ಐಓಸಿಎಲ್ ಅಪ್ರೆಂಟಿಸ್‌ಶಿಪ್ ಅರ್ಹತೆ,
IOCL ನೇಮಕಾತಿ ಪರೀಕ್ಷೆ ಸಿದ್ಧತೆ,
ಕನ್ನಡದಲ್ಲಿ IOCL ಉದ್ಯೋಗ ಮಾಹಿತಿ,
ಐಓಸಿಎಲ್ ಅಪ್ರೆಂಟಿಸ್ ಸಂಬಳ ಮತ್ತು ಪ್ರಯೋಜನಗಳು,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.